ಮರೆಯಾದ ಸುನೀಲನ ಮನೆಗೆ ಜಗದೀಶ ಶೆಟ್ಟರ ಭೇಟಿ- ಕುಟುಂಬಕ್ಕೆ ಸಾಂತ್ವನ
ಹುಬ್ಬಳ್ಳಿ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಪವರ್ ಟಿವಿ ಕ್ಯಾಮರಾಮನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸಣ್ಣ ವಯಸ್ಸಿನಲ್ಲೇ ತೀರಿಕೊಂಡ ಸುನೀಲ ಪಾಚಂಗೆಯ ಹುಬ್ಬಳ್ಳಿಯ ನಿವಾಸಕ್ಕೆ ತೆರಳಿದಾಗ ಸುನೀಲ ಕುಟುಂಬದವರು ಕಣ್ಣೀರಾದರು. ಪಾಲಕರ ನೋವಿಗೆ ಸ್ಪಂಧಿಸಿದ ಜಗದೀಶ ಶೆಟ್ಟರ, ಸುನೀಲನ ಬಗ್ಗೆ ಮಾತನಾಡಿ ಕುಟುಂಬದವರಿಗೆ ಧೈರ್ಯ ತೆಗೆದುಕೊಳ್ಳುವಂತೆ ಹೇಳಿದರು.
ತನ್ನ ಚಿಕ್ಕ ವಯಸ್ಸಿನಲ್ಲಿ ಮಾಧ್ಯಮ ರಂಗಕ್ಕೆ ಬಂದಿದ್ದ ಸುನೀಲ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆತು ಇರುತ್ತಿದ್ದನ್ನ ಆತನ ಸಹೋದ್ಯೋಗಿಗಳೊಂದಿಗೆ ಮಾತನಾಡಿ ತಿಳಿದುಕೊಂಡ ಜಗದೀಶ ಶೆಟ್ಟರ, ಸುನೀಲನ ಕುಟುಂಬಕ್ಕೆ ತಮಗಾದ ಸಹಾಯ ಮಾಡಿದ್ರು.
ಕಳೆ ವಾರದ ಸುನೀಲ ಬೈಕಿನಲ್ಲಿ ಮನೆಗೆ ಹೋಗಬೇಕಾದ ಸಮಯದಲ್ಲಿ ಮತ್ತೊಂದು ಬೈಕಿಗೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೇ ರವಿವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.