ಧಾರವಾಡ: 126 ಕೊರೋನಾ ಪಾಸಿಟಿವ್- 101 ಗುಣಮುಖ: ಇಬ್ಬರು ಸೋಂಕಿತರ ಸಾವು

ಧಾರವಾಡ ಜಿಲ್ಲೆಯಲ್ಲಿಂದು 126 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 18118ಕ್ಕೇರಿದೆ. ಇಂದು 101ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 15063ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊರೋನಾ ಪಾಸಿಟಿವ್ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ 2ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಒಟ್ಟು 508 ಸೋಂಕಿತರು ಕೊರೋನಾ ವೈರಸ್ ನಿಂದ ತೀರಿಕೊಂಡಿದ್ದಾರೆ.
ಮತ್ತಷ್ಡು ಮಾಹಿತಿಯಿಲ್ಲಿದೆ ನೋಡಿ…