ಶಿಕ್ಷಕರನ್ನ ಚುನಾವಣೆಗೆ ಕಾರ್ಯಕ್ಕೆ ಬಳಸಿಕೊಳ್ಳಬೇಡಿ: ಚುನಾವಣಾ ಆಯೋಗ ಆದೇಶ
ಬೆಂಗಳೂರು: 2020 ಡಿಸೆಂಬರ್ ತಿಂಗಳಲ್ಲಿ ಮುಕ್ತಾಯವಾಗುವ ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ವಿವಿಧ ಸ್ಥಳಗಳಿಗೆ ಶಿಕ್ಷಕರನ್ನ ನಿಯೋಜನೆ ಮಾಡುವುದನ್ನ ಕೈಬಿಡುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರು ದೀರ್ಘಾವಧಿಯ ಚುನಾವಣೆ ಕರ್ತವ್ಯಗಳಿಗೆ ಅಂದರೇ, ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನಿಯೋಜನೆ ಮಾಡದೇ, ಕೇವಲ ಚುನಾವಣಾ ದಿನಕ್ಕೆ ಸೀಮಿತಗೊಳಿಸಿ ಕರ್ತವ್ಯಕ್ಕೆ ಬಳಸಿಕೊಳ್ಳುವಂತೆ ಹೇಳಿದ್ದಾರೆ.
ವೀಡಿಯೋ ಸಂವಾದದಲ್ಲಿಯೂ ಸಹ ಆದಷ್ಟು ಶಿಕ್ಷಕರು ಹಾಗೂ ಉಪನ್ಯಾಸಕರನ್ನ ನೇಮಿಸಿಕೊಳ್ಳದಂತೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ.
ಈಗಾಗಲೇ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನ ಮತ್ತೆ ಚುನಾವಣೆಗೂ ಬಳಕೆ ಮಾಡಿಕೊಳ್ಳುತ್ತಾರೆಂಬ ಆತಂಕವನ್ನ ಚುನಾವಣೆ ಆಯೋಗ ದೂರ ಮಾಡಿದೆ.

