Posts Slider

Karnataka Voice

Latest Kannada News

ಸಂಗೀತ ಶಾಲೆ ಪಕ್ಕದಲ್ಲೇ ಗಾಂಜಾ ಮಾರಾಟ: ಇಬ್ಬರು ಗಾಂಜಿಗರ ಬಂಧನ- 3ಕೆಜಿ 336ಗ್ರಾಂ ವಶ

Spread the love

ಹುಬ್ಬಳ್ಳಿ: ನೃಪತುಂಗದ ಕೆಳಗಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಅಶೋಕನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಮಧುರಾ ಪ್ಲಾಟ್ ನ್ಯೂ ಬಾದಾಮಿ ನಗರದ ಶ್ರೀನಿವಾಸ ಗುರುದಾಸ ಬಾಬು ರಾವ್ ಹಾಗೂ ಶಬರಿ ನಗರ ಕೇಶ್ವಾಪೂರ ನಿವಾಸಿ ವಿನಾಯಕ ಜವಾಹರಲಾಲ್ ಮಗಜಿಕೊಂಡಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 1ಲಕ್ಷ 66800 ಮೌಲ್ಯದ  3ಕೆಜಿ 336 ಗ್ರಾಂ ಗಾಂಜಾ, 900 ನಗದು ಹಣ, ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಶೋಕ ನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ ರವಿಚಂದ್ರ ಡಿ.ಬಿ, ಪಿ.ಎಸ್.ಐ  ಶ್ರೀದೇವಿ ಜಿ.ಎಸ್, ಎ.ಎಸ್.ಐಗಳಾದ ಎನ್.ಸಿ ಪಾಟೀಲ್, ಆರ್.ಎಸ್.ಮರಿಗೌಡರ, ಸಿಬ್ಬಂದಿಗಳಾದ ಎಸ್.ಬಿ.ಬೂದಣ್ಣವರ, ಅಭಯ್ ಕಟ್ನಳ್ಳಿ, ಕಮಲಾ ನಾಶಿ, ಡಿ.ಎಸ್.ಪಾಟೀಲ್, ಬಾಬು ಹಾರುಗೊಪ್ಪ, ಮೈಲಾರಿ ಹಂಚಿನಾಳ, ಸುದಾಕರ್ ನೆಸೂರ, ಮಂಜುಳಾ ರಾಮಣ್ಣವರ, ಗಣಪತಿ ಅಸೋದೆ, ವಿನಾಯಕ ಹೂಟಿ ಕಾರ್ಯಾಚರಣೆ ನಡೆಸಿದ್ದರು.

ಸರ್ಕಾರಿ ಪಂಚರುಗಳಾದ ಮಹೇಶ ಹಿಂಚಕನ್ ಮತ್ತು ಮಹೇಶ ಸಾವಳಗಿ ಸಮಕ್ಷಮ ದಾಳಿ ಮಾಡಿ ಆರೋಪಿತಗಳನ್ನ ಹಿಡಿದಿರುವ ಪೊಲೀಸರು.


Spread the love

Leave a Reply

Your email address will not be published. Required fields are marked *