ಶಾಲೆ ಆರಂಭಿಸಿ: ಮಕ್ಕಳ ಹಕ್ಕುಗಳ ಆಯೋಗ ಸರಕಾರಕ್ಕೆ ಪತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ಶಾಲೆಗಳನ್ನ ಆರಂಭಿಸಿ ಎಂದು ಮಕ್ಕಳ ಹಕ್ಕುಗಳ ಆಯೋಗ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಸಾಕಷ್ಟು ಎಚ್ಚರಿಕೆ ವಹಿಸುವಂತೆಯೂ ಆಯೋಗ ಹೇಳಿಕೊಂಡಿದೆ.
ರಾಜ್ಯದಲ್ಲಿ ಈಗಾಗಲೇ ಶಾಲೆ ಆರಂಭಿಸುವ ಬಗ್ಗೆ ಪರ-ವಿರೋಧದ ನಡುವೆಯೂ ಆಯೋಗ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಶಾಲೆಗಳನ್ನ ಆರಂಭಿಸಲು ಮುಂದಾಗುವಂತೆ ಕೇಳಿಕೊಂಡಿದೆ. ಶಾಲೆಗಳನ್ನ ಆರಂಭಿಸುವಾಗ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಿದೆ.
ಶಾಲೆಗಳನ್ನ ಆರಂಭಿಸದೇ ಇರುವುದರಿಂದ ಬಾಲ್ಯವಿವಾಹ ಮತ್ತು ಮಕ್ಕಳ ಸಾಗಾಣಿಕೆ, ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದೆ ಎಂದು ಆಯೋಗ ಆತಂಕವ್ಯಕ್ತಪಡಿಸಿದೆ. ಇದರಿಂದ ಶಾಲೆಗಳನ್ನ ಆರಂಭಿಸುವ ಮುನ್ನ ಪೋಷಕರು ಹಾಗೂ ಎಸ್ ಡಿಎಂಸಿ ಜೊತೆಗೆ ಪೂರ್ವಭಾವಿ ಸಭೆ ನಡೆಸಬೇಕು ಎಂದು ಹೇಳಿದೆ.
ಗ್ರಾಮ ಪಂಚಾಯತಿ ಜೊತೆಗೂಡಿ ಶಾಲೆಯನ್ನ ಶುಚಿಗೊಳಿಸಬೇಕು. ಪ್ಲೋರಿಂಗ್ ನ್ನೂ ಕೂಡಾ ಸ್ವಚ್ಚತೆಯಿಂದ ಇರುವಂತೆ ಮಾಡಬೇಕೆಂದು ಹೇಳಿದೆ. ಕಡ್ಡಾಯವಾಗಿ ಗುಣಮಟ್ಟದ ಮಾಸ್ಕಗಳನ್ನ ಕೊಡಬೇಕೆಂದು ಆಯೋಗ ಸರಕಾರಕ್ಕೆ ಹೇಳಿದೆ.
ಮಕ್ಕಳೇ ಕೊರೋನಾ ಸೂಪರ್ ಸ್ಪೈರ್ಡರ್ ಆಗಬಹುದೆಂಬುದನ್ನ ಗಮನದಲ್ಲಿಟ್ಟುಕೊಂಡು ಮುನ್ನಡೆಯುವಂತೆಯೂ ಆಯೋಗ ಹೇಳಿಕೊಂಡಿದ್ದು, ಸರಕಾರಕ್ಕೆ ಇದಕ್ಕೇನು ಉತ್ತರ ಕೊಡುತ್ತದೆಯೋ ಕಾದು ನೋಡಬೇಕಿದೆ.