ಶಿಕ್ಷಕರ ವರ್ಗಾವಣೆ: ಚು.ಆಯೋಗದ ಅನುಮತಿ: ಗ್ರಾಮೀಣ ಸಂಘದ ಮನವಿ
ಧಾರವಾಡ: ಶಿಕ್ಷಕರ ವರ್ಗಾವಣೆಯನ್ನ ಚುನಾವಣೆ ಆಯೋಗದ ಅನುಮತಿ ಪಡೆದು ಪ್ರಕ್ರಿಯೆ ಆರಂಭಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿಕೊಂಡಿದೆ.
ಇದರ ಜೊತೆಗೆ ಮುಖ್ಯ ಚುನಾವಣಾಧಿಕಾರಿಗಳಿಗೂ ಮನವಿ ಮಾಡಿಕೊಂಡಿರುವ ಸಂಘವೂ, ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡುವಂತೆ ಕೋರಿದೆ.
ಮನವಿ ಪತ್ರದ ಸಾರಾಂಶ
ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು
ಕರ್ನಾಟಕ ಚುನಾವಣಾ ಆಯೋಗ
ಬೆಂಗಳೂರು
ವಿಷಯ..ಶಿಕ್ಷಕರ ವರ್ಗಾವಣೆಗಗೆ ಅನುಮತಿ ನೀಡುವ ಬಗ್ಗೆ ಮನವಿ
ಮಾನ್ಯರೆ
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ ರಾಜ್ಯ ಘಟಕ ಹುಬ್ಬಳ್ಳಿ ಇದರ ಸರ್ವ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ.ಶಿಕ್ಷಕರ ವರ್ಗಾವಣೆಯು ಕಳೆದ ಐದು ರ್ಷಗಳಲ್ಲಿ ಒಂದು ಬಾರಿ ಮಾತ್ರ ನಡೆದಿದೆ.ವರ್ಗಾವಣೆಗಾಗಿ ಜಾತಕ ಪಕ್ಷಿಯಂತೆ ಕಾದಿರುವ ವರ್ಗಾವಣೆ ಅಪೇಕ್ಷಿತರು ಕಂಗೆಟ್ಟಿರುವರು.ತೀವ್ರತರ ಕಾಯಿಲೆಯುಳ್ಳವರು..ವಿಕಲ ಚೇತನರು..ಪತಿ ಪತ್ನಿಯರು..ವಿಧವೆಯರು ಹತಾಶರಾಗಿ ಭ್ರಮನಿರಶನಗೊಂಡಿದ್ದಾರೆ
ಈ ದಿಸೆಯಲ್ಲಿ ಶಿಕ್ಷಕರ ವರ್ಗಾವಣೆಗಳು ಕೌನ್ಸಲಿಂಗ ಮೂಲಕ ಹಾಗೂ ಕೋರಿಕೆ ಮತ್ತು ಪರಸ್ಪರ ಮಾತ್ರ ನಡೆಯುತ್ತವೆ..ಕಾರಣ ಚುನಾವಣಾ ನೀತಿ ಸಂಹಿತೆಯಿಂದ ವರ್ಗಾವಣೆ ಪ್ರಕ್ರಿಗೆ ತಡೆನೀಡದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಬಂಧಿಸಿದ ಮಾನ್ಯ ಅಧಿಕಾರಿಗಳವರಿಗೆ ವರ್ಗಾವಣೆ ಪ್ರಕ್ರಿಯೆ ನಡೆಸಲು ತಾವುಗಳು ಅನುಮತಿಸಿ ನಾಡಿನ ವರ್ಗಾವಣೆ ಅಪೇಕ್ಷಿತರ ಪಾಲಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ
ಮುಂಬರುವ ಚುನಾವಣೆಗಳಲ್ಲಿ ಕಾರ್ಯ ನಿರ್ವಹಿಸುವ ಮತಗಟ್ಟೆ ಅಧಿಕಾರಿಗಳಿಗೆ ಮತದಾನದ ದಿನ ತಡರಾತ್ರಿ ಆಗುವುದರಿಂದ ಮತದಾನದ ಮಾರನೇ ದಿನ ಅನ್ಯ ಕಾರ್ಯ ನಿಮಿತ್ಯ ಪರಿಗಣಿಸಬೇಕೆಂದು ಹಾಗೂ ಗೌರವ ಧನವನ್ನು ಎರಡು ಪಟ್ಟು ಹೆಚ್ಚಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.