Posts Slider

Karnataka Voice

Latest Kannada News

ಬಿಜೆಪಿ ಯುವಕರ ಪಕ್ಷ: ಶಾಸಕ ಅಮೃತ ದೇಸಾಯಿ ಅಮ್ಮಿನಬಾವಿಯಲ್ಲಿ ಏನೇನಂದ್ರು ಗೊತ್ತಾ..?

Spread the love

ಧಾರವಾಡ: ಭಾರತೀಯ ಜನತಾ ಪಕ್ಷ ಯುವಕರ ಪಕ್ಷವಾಗಿದ್ದು, ನೂರಕ್ಕೆ ತೊಂಬತ್ತರಷ್ಟು ಯುವಕರ ಬಿಜೆಪಿ ಪರವಾಗಿಯೇ ಇದ್ದಾರೆಂದು ಬಿಜೆಪಿ ಶಾಸಕ ಅಮೃತ ದೇಸಾಯಿ ಹೇಳಿದರು.

ಧಾರವಾಡ ತಾಲೂಕು ಅಮ್ಮಿನಭಾವಿ ಗ್ರಾಮದಲ್ಲಿ ನಡೆದ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆ ಧಾರವಾಡ – 71ರ  ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿ ಶಾಸಕ ದೇಸಾಯಿ ಮಾತನಾಡಿದರು.

ಪ್ರಸಕ್ತ ಕೊರೋನಾ‌ ಮಹಾಮಾರಿಯ ಬಗ್ಗೆ ನಾವೆಲ್ಲಾ‌ ಎಚ್ಚರಿಕೆ ವಹಿಸುವುದು ಅನಿವಾರ್ಯ. ಪಕ್ಷದ ಜವಾಬ್ದಾರಿ ಸ್ವೀಕರಿಸಿದ ಎಲ್ಲಾ ಪದಾಧಿಕಾರಿಗಳು ಪಕ್ಷ ನಿಷ್ಠರಾಗಿ ಕೆಲಸ ಮಾಡಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕೆಂದು ಶಾಸಕ ಅಮೃತ ದೇಸಾಯಿ ಕಾರ್ಯಕರ್ತರಿಗೆ ಹೇಳಿದರು.

ಕಾರ್ಯಕ್ರಮದಲ್ಲಿ‌ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೋಮಾರ ದೇಸಾಯಿ, ತಾಲೂಕು ಅಧ್ಯಕ್ಷ ರುದ್ರಪ್ಪ ಅರಿವಾಳ, ಪಕ್ಷದ  ಹಿರಿಯ ತವನಪ್ಪ ಅಷ್ಟಗಿ, ಶಶಿ ಕುಲಕರ್ಣಿ, ಶಂಕರ ಮುಗದ, ಗುರುನಾಥಗೌಡ ಗೌಡ್ರ, ಸಂಭಾಜಿ ಜಾಧವ ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *