Posts Slider

Karnataka Voice

Latest Kannada News

ಪವನ ಶಾಲೆ ಮುಖ್ಯಸ್ಥ ಶಂಕರ ಪಾಟೀಲ- ಕವಿವಿ ನಿವೃತ್ತ ಡೆಪ್ಯೂಟಿ ರಿಜಿಸ್ಟ್ರಾರ್ ನಿಧನ

Spread the love

ಧಾರವಾಡ: ಬಾರಾಕೋಟ್ರಿ ಪ್ರದೇಶದಲ್ಲಿರುವ ಪವನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಶಂಕರ ಪಾಟೀಲ, ಚಿಕಿತ್ಸೆ ಫಲಿಸದೇ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಶೈಕ್ಷಣಿಕ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಂಕರ ಪಾಟೀಲರಿಗೆ ಕೆಲವು ದಿನಗಳಿಂದ ಅನಾರೋಗ್ಯ ಕಾಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ವಿಜಯಾ ಐನಾಪುರ

ಇಲ್ಲಿಯ ಶ್ರೀನಗರ ನಿವಾಸಿ ಕರ್ನಾಟಕ ವಿಶ್ವವಿದ್ಯಾಲಯ ದ ನಿವೃತ್ತ ಡೆಪ್ಯೂಟಿ ರೆಜಿಸ್ಟ್ರಾರ್ ವಿಜಯಾ ಕೃಷ್ಣಾ ಐನಾಪುರ (65) ಶುಕ್ರವಾರ ನಿಧನರಾದರು.

ಮೃತರಿಗೆ ಪತಿ, ನಾಲ್ವರು ಪುತ್ರರು  ಸೇರಿದಂತೆ ಅಪಾರ ಬಂಧುಗಳು ಇದ್ದಾರೆ.

ಮೃತರ ಅಂತ್ಯಕ್ರಿಯೆ ಶನಿವಾರ ಕವಿವಿ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *