ಕಾರಲ್ಲೇ IPL ಬೆಟ್ಟಿಂಗ್: ‘ಶಾಣ್ಯಾಗಳನ್ನ’ ಹೆಡಮುರಿಗೆ ಕಟ್ಟಿದ ಪೊಲೀಸರು

ವಿಜಯಪುರ: ಮನೆಯಲ್ಲಿಯೋ ಅಥವಾ ಅಪಾರ್ಟಮೆಂಟಿನಲ್ಲೋ ಬೆಟ್ಟಿಂಗ್ ಆಡುತ್ತಿದ್ದವರನ್ನ ಮತ್ತು ಬಂಧನವಾಗಿರೋರನ್ನ ನೀವೂ ನೋಡಿರುತ್ತೀರಿ. ಆದ್ರೆ, ಗುಮ್ಮಟನಗರಿಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಬೇಕೆಂದು ಹೊಸತನದಿಂದ ಬೆಟ್ಟಿಂಗ್ ಆಡಿಸಲು ಹೋದವರನ್ನೂ ಪೊಲೀಸರೇ ಆರೋಪಿಗಳಿಗೆ ಚಳ್ಳೆಹಣ್ಣು ತಿನ್ನಿಸುವಂತೆ ಮಾಡಿದ್ದಾರೆ.
ಹೌದು.. ಈ ಆರೋಪಿಗಳು ಪೊಲೀಸರ ಕಣ್ಣುತಪ್ಪಿಸಿ ಕಾರಿನಲ್ಲಿ ಕುಳಿತುಕೊಂಡು IPL ಬೆಟ್ಟಿಂಗ್ ಆಡಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ವಿಜಯಪುರ ನಗರದ ಸಿಂದಗಿ ನಾಕಾ ಬಳಿ ಪೊಲೀಸರ ದಾಳಿ ನಡೆಸಿ ಮೂವರನ್ನ ಬಂಧಿಸಿದ್ದಾರೆ.
ಸಚಿನ್ ಪವಾರ, ದೀಲಿಪ್ ಬಿರಂಗಿ, ಜಾವೇದ್ ಹಸನಸಾಹೇಬ್ ಬಂಧಿತ ಆರೋಪಿಗಳು. ಆರೋಪಿಗಳಿಂದ 64 ಸಾವಿರದ 900 ನಗದು, 11 ಮೊಬೈಲ್, ಒಂದು ಡಸ್ಟರ್ ಕಾರ್, ಒಂದು ಲ್ಯಾಪ್‌ಟಾಪ್ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಗೋಳಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.