ದೀಪಾವಳಿಗಿಲ್ಲ ಪಟಾಕಿ-ಮದ್ದು: ಹೊರಬಿತ್ತು ಜಿಲ್ಲಾಧಿಕಾರಿ ಆದೇಶ

ರಾಯಚೂರು: ನವೆಂಬರ್ 16ಕ್ಕೆ ಆಚರಣೆ ಮಾಡುವ ದೀಪಾವಳಿ ಹಬ್ಬದಲ್ಲಿ ಈ ಬಾರಿ ಪಟಾಕಿ-ಮದ್ದನ್ನ ಸುಡುವ ಹಾಗಿಲ್ಲವೆಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಆದೇಶ ಹೊರಡಿಸಿದ್ದಾರೆ.
ದೀಪಾವಳಿ ಹಬ್ಬದಂದು ಸಾರ್ವಜನಿಕರು ಸಿಡಿ ಮದ್ದುಗಳನ್ನ ಸಿಡಿಸುತ್ತ ಬಂದಿದ್ದು ಮತ್ತೂ ಮಾರಾಟವೂ ನಡೆಯುತ್ತಲೇ ಬಂದಿತ್ತು. ಆದರೆ, ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಡಿ ಮದ್ದು ಸಿಡಿಸುವುದು ಮತ್ತೂ ಮಾರಾಟವನ್ನೂ ನಿಷೇಧ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.
ರಾಯಚೂರು ಜಿಲ್ಲೆಯಾಧ್ಯಂತ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ 2020-21ನೇ ಸಾಲಿನ ದೀಪಾವಳಿ ಹಬ್ಬದಂದು ಪಟಾಕಿಗಳನ್ನ ಸಿಡಿಸುವುದು ಮತ್ತು ಮಾರಾಟ ಮಾಡುವುದನ್ನ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ವರ್ಷದ ಕೊನೆಯ ಹಬ್ಬದಲ್ಲಿಯಾದರೂ ಖುಷಿ ಖುಷಿಯಿಂದ ಹಬ್ಬವನ್ನ ಆಚರಣೆ ಮಾಡಬೇಕು, ಪಟಾಕಿ ಹಾರಿಸಬೇಕೆಂದುಕೊಂಡವರಿಗೆ ಈ ಆದೇಶ ಅಪತ್ಯವಾಗಲಿರುವುದಂತೂ ಸತ್ಯ.