ಕೊರೋನಾದಿಂದ ಮನೆಗೆ ಗಂಡ ಬಂದ: ಸತಿಯೊಂದಿಗಿದ್ದಾತ ಆತನ ಮರಳಿ ಬಾರದೂರಿಗೆ ಕಳಿಸಿದ್ರು..!

ಹುಬ್ಬಳ್ಳಿ: ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದು ಟ್ವಿಸ್ಟ್ ಪಡೆದಿದ್ದು, ಸತಿಯ ತನ್ನೊಂದಿಗಿದ್ದವನ ಜೊತೆಗೂಡಿ ಗಂಡನ ಕೊಲೆ ಮಾಡಿ ರೇಲ್ವೆ ಹಳಿಗೆ ಹಾಕಿದ್ದು ಎನ್ನುವುದು ಬಹಿರಂಗವಾಗಿದೆ.
ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಣೆಬೆನ್ನೂರ ರೇಲ್ವೆ ನಿಲ್ದಾಣ ಬಳಿ ಶ್ರೀನಿವಾಸಪುರ ಗಂಗಾಜಲ ತಾಂಡಾದ ಚಂದ್ರಪ್ಪ ಲಮಾಣಿಯ ಶವ ಸಿಕ್ಕಿತ್ತು. ಅದು ಕೊರೋನಾದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿತ್ತು. ಆದರೆ, ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನಡೆಸಿದ ತನಿಖೆಯಲ್ಲಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಪತ್ತೆಯಾಗಿದ್ದು, ಆರೋಪಿಗಳನ್ನೂ ಬಂಧನ ಮಾಡಲಾಗಿದೆ.
ಚಂದ್ರಪ್ಪ ಲಮಾಣಿಯ ಪತ್ನಿ ಶೋಭಾ ಹಾಗೂ ಅವಳ ಜೊತೆಗಾರ ದಿಳ್ಳೆಪ್ಪ ಯಮನಪ್ಪ ಅಂತರವಳ್ಳಿ ಎಂಬಾತನನ್ನ ಬಂಧನ ಮಾಡಲಾಗಿದೆ. ರೇಲ್ವೆ ನಿಲ್ದಾಣದ ಪಕ್ಕದ ಹೊಲದಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಸಾಕ್ಷಿ ಮಾಡುವ ಉದ್ದೇಶದಿಂದ ರೇಲ್ವೆ ಹಳಿಯ ಮೇಲೆ ಶವ ಒಗೆದು ಹೋಗಿದ್ದರು.
ಕೊರೋನಾದ ಮುನ್ನ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದ ಚಂದ್ರಪ್ಪ, ಕೊರೋನಾ ಹೆಚ್ಚಾದ ಮೇಲೆ ಮನೆಯಲ್ಲಿಯೇ ಸಮಯ ಕಳೆಯತೊಡಗಿದ. ಹೀಗಾಗಿ ತನ್ನ ಅನೈತಿಕ ಸಂಬಂಧ ಹೊರಗೆ ಬರತ್ತೆ ಎಂದುಕೊಂಡು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆನ್ನಲಾಗಿದೆ.
ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನೇತೃತ್ವದಲ್ಲಿ ಪಿಎಸೈ ಸತ್ಯಪ್ಪ, ಸಿಬ್ಬಂದಿಗಳಾದ ಬಿ.ಎನ್.ರಾಮನಗೌಡ್ರ, ಎಫ್.ಜಿ.ಪುಲ್ಲಿ, ಎಸ್.ಬಿ.ಪಾಟೀಲ, ಪ್ರವೀಣ ಪಾಟೀಲ, ರವಿ ವಾಲ್ಮೀಕಿ, ಸುಭಾಸ ದಳವಾಯಿ, ರಾಯಪ್ಪ ಗುಂಡಗಿ, ತಿಪ್ಪೇಸ್ವಾಮಿ, ರಾಚೋಟಪ್ಪ ಬಿರಾದಾರ, ದ್ರಾಕ್ಷಾಯಿಣಿ ಗುಂಡಿನಮನಿ, ಜನ್ನತಬಿ ಶೇಖಸನದಿ, ಶೃತಿ ಭೀಮನಗೌಡರ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.