ಪೊಲೀಸ್ ಕಮೀಷನರ್ ಜನರ ಸಹಕಾರ ಕೇಳ್ಯಾರ ನೋಡ್ರೀ- ಚೂರು ಹೆಲ್ಪ್ ಮಾಡ್ರಲ್ಲಾ ಊರ್ ಸಂಬಂಧ
1 min readಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧಗಳನ್ನುತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಬೀಟ್ ಪದ್ದತಿ (ನ್ಯೂ ಬೀಟ್ ಸಿಸ್ಟಮ್) ಯನ್ನು ಪೊಲೀಸ್ ಕಮೀಷನರೇಟ್ ಜಾರಿಗೆ ತಂದಿದೆ.
ಜನರಿಗೆ ಹತ್ತಿರವಾಗುವಂತೆ ಪ್ರತಿ ಬೀಟ್ ಗೆ ಪೊಲೀಸರನ್ನು ನೇಮಕ ಮಾಡಿ ಸಾರ್ವಜನಿಕರ ತೊಂದರೆಗಳಿಗೆ ಕೂಡಲೇ ಸ್ಪಂದಿಸುವ ದೃಷ್ಟಿಯಿಂದ ನೇಮಕ ಮಾಡಲಾಗಿದೆ. ಹೊಸ ಬೀಟ್ ಪದ್ದತಿಯ ಸುಧಾರಣೆಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡದ ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ಈ ಕೆಳಕಂಡ ವಿಳಾಸದ ಮುಖಾಂತರ ಸಲ್ಲಿಸಲು ಕೋರಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ ಆಯುಕ್ತರರವರ ಕಾರ್ಯಾಲಯದ ದೂರವಾಣಿ ಸಂಖ್ಯೆ, ಎಸ್‌ಎಮ್‌ಎಸ್/ ವಾಟ್ಸಪ್/ಇಮೇಲ್/ ಟ್ವಿಟ್ಟರ್; ಫೇಸಬುಕ್ ಮುಖಾಂತರ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.
ಸಂಪರ್ಕಿಸಬೇಕಾದ ವಿಳಾಸಗಳು.
ಪೊಲೀಸ್ ಕಂಟ್ರೊಲ್ ರೂಂ ಹು-ಧಾ : 0836-2233555-2233533
Whatsapp/SMS No.9480802002
Email : ccrhub@ksp.gov.in
Twitter : www.twitter.com/compolhdc
Facebook : www.facebook.com/hdcpolice