ನವಲಗುಂದ ಕ್ಷೇತ್ರದಲ್ಲಿ ತಡರಾತ್ರಿಯಿಂದಲೂ ಕಾರ್ಯಾಚರಣೆ: ಅಧಿಕಾರಿಗಳ ಕಾರ್ಯಕ್ಷಮತೆ

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನವಲಗುಂದ ಪಟ್ಟಣ ಮತ್ತು ಅಣ್ಣಿಗೇರಿಯಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದು, ಶಾಸಕ ಶಂಕರ ಪಾಟೀಲಮುನೇನಕೊಪ್ಪ ಸೂಚನೆ ಮೇರೆಗೆ ಬೆಳಗಿನ ಐದು ಗಂಟೆಯಿಂದಲೇ ಅಧಿಕಾರಿ ವರ್ಗ ಕಾರ್ಯಾಚರಣೆ ನಡೆಸುತ್ತಿದೆ.
ಯಾವ ಪ್ರದೇಶದಲ್ಲಿ ನೀರು ಬಂದಿದೇಯೋ ತಕ್ಷಣವೇ ಅಲ್ಲಿಗೆ ತೆರಳಿರುವ ಅಧಿಕಾರಿಗಳು ನೀರು ಬೇರೆ ಕಡೆ ಹೋಗುವಂತೆ ಜೆಸಿಬಿ ಮೂಲಕ ವ್ಯವಸ್ಥೆ ಮಾಡುತ್ತಿದ್ದಾರೆ. ಕೆಲವೆಡೆ ಬೆಳಿಗ್ಗೆಯೂ ಕೂಡಾ ಕಾಮಗಾರಿ ನಡೆಸಿ, ನೀರು ತಡೆಯುತ್ತಿದ್ದ ಪ್ರದೇಶವನ್ನ ಸ್ವಚ್ಚಗೊಳಿಸಿ, ನೀರು ಹರಿದು ಹೋಗುವಂತೆ ಮಾಡಲಾಯಿತು.
ಕಳೆದ ರಾತ್ರಿ ಎಲ್ಲೇಲ್ಲಿ ಅವಶ್ಯಕತೆ ಕಂಡು ಬಂದಿದೇಯೋ ಅಲ್ಲೇಲ್ಲ ಹೋಗಿರುವ ಅಧಿಕಾರಿಗಳು, ಪಟ್ಟಣ ಪಂಚಾಯತಿ ಸದಸ್ಯರ ಮೂಲಕವೂ ಮಾಹಿತಿಯನ್ನ ಪಡೆದು ಕ್ರಮವನ್ನ ಜರುಗಿಸಿದ್ದಾರೆ.
ಶಾಸಕ ಶಂಕರ ಪಾಟೀಲಮುನೇನಕೊಪ್ಪರಿಗೆ ಕೊರೋನಾ ಪಾಸಿಟಿವ್ ಬಂದು ಇದೀಗ ಆರೋಗ್ಯ ಸುಧಾರಣೆ ಕಂಡಿದ್ದು, ಪ್ರತಿಯೊಂದು ವಿಷಯದ ಬಗ್ಗೆಯೂ ಮಾಹಿತಿಯನ್ನ ಪಡೆದು, ಸಾವರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ.