ಹುಬ್ಬಳ್ಳಿ-ಧಾರವಾಡ ಬೆಟ್ಟಿಂಗ್ ಆರು ಜನರ ಬಂಧನ: 8ಲಕ್ಷ ರೂಪಾಯಿ ವಶ- 6ಬಂಧನ

ಧಾರವಾಡ: ಉಪನಗರ ಠಾಣೆ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, 7ಲಕ್ಷ 60100 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಕೆಲಗೇರಿ ಆಂಜನೇಯನಗರ ಮಂಜುನಾಥ ವಾಲಿಕಾರ ಹಾಗೂ ಸಲಕಿನಕೊಪ್ಪದ ಅವಿನಾಶ ಚೌವ್ಹಾಣ ಬಂಧಿತರಾಗಿದ್ದು, 2ಮೊಬೈಲ್ ಗಳನ್ನೂ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್ ನ ಕರಾಳತೆ ಹುಬ್ಬಳ್ಳಿ-ಧಾರವಾಡದಲ್ಲಿ ಎಷ್ಟೊಂದು ಹೆಚ್ಚಾಗಿದೆ ಎನ್ನುವುದಕ್ಕೆ ಪ್ರತಿದಿನವೂ ನಡೆಯುತ್ತಿರುವ ದಾಳಿಗಳಿಂದಲೇ ಗೊತ್ತಾಗುತ್ತಿದ್ದು, ದಿನವೂ ಹಲವರು ಸಿಕ್ಕು ಬೀಳುತ್ತಿದ್ದಾರೆ.
ಇ@ಎನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿ.ಎಸ್.ಕಾಡದೇವರಮಠ ಹಾಗೂ ಕೇಶ್ವಾಪುರ ಠಾಣೆ ಇನ್ಸಪೆಕ್ಟರ ಸುರೇಶ ಕುಂಬಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಕೃಷ್ಣಾ ಜರತಾರಘರ, ಶಬ್ಬೀರ ಹೊಸಪೇಟೆ, ಪವನ ಹಿರೇಮನಿ ಹಾಗೂ ಸುರೇಶ ಬುರಬುರೆ ಎಂಬ ನಾಲ್ವರನ್ನ ಬಂಧನ ಮಾಡಲಾಗಿದೆ.
ಬಂಧಿತರು ಗದಗ ರಸ್ತೆಯ ಬಳಿ ಬೆಟ್ಟಿಂಗ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ಬಂಧಿತರಿಂದ 15800 ರೂಪಾಯಿ ನಗದು, ಮೂರು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಪಿಎಸೈ ಎಂ.ಬಾಬಾ ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ಆರ್.ಎಲ್.ರಾಠೋಡ, ವಿ.ಎ.ಅಳಗವಾಡಿ, ಎಫ್,ವೈ.ಸುಣಗಾರ, ಎ.ಎಂ.ತಹಶೀಲ್ದಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು