ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಕೊರೋನಾ ಬಂದಿಲ್ಲ: ವರದಿಯಲ್ಲಿ ಬಹಿರಂಗಗೊಂಡಿದ್ದು ಏನೇನು..?
1 min readಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಾಲ್ಕು ಮಕ್ಕಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ವಿಷಯ ರಾಜ್ಯಾಧ್ಯಂತ ಬಹು ಚರ್ಚೆಗೆ ಕಾರಣವಾಗಿತ್ತು. ಆದರೆ, ಮಕ್ಕಳಿಗೆ ಕೊರೋನಾ ಬರಲು ಕಾರಣವಾಗಿದ್ದು, ಶಿಕ್ಷಕರಲ್ಲ ಎಂಬುದು ಗೊತ್ತಾಗಿದೆ.
ಈ ಬಗ್ಗೆ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಗೆ ಮಾಹಿತಿಯನ್ನ ರವಾನೆ ಮಾಡಿದ್ದು, ಮಾಶಾಳ ಗ್ರಾಮದ ಘಟನೆಗೂ ಶಿಕ್ಷಕರಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಮಾಶಾಳ ಗ್ರಾಮದಲ್ಲಿ Random ಆಗಿ 203 ವಿದ್ಯಾರ್ಥಿಗಳನ್ನ ತಪಾಸಣೆ ಮಾಡಿದಾಗ 4 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದ್ದಾರೆಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.
ಮಾಶಾಳ ಗ್ರಾಮ ಮಹಾರಾಷ್ಟ್ರಕ್ಕೆ ಹತ್ತಿರವಿರುವುದರಿಂದ ಕೊರೋನಾ ಹರಡಿರುವ ಸಾಧ್ಯತೆಯಿದೆ. ಇಲ್ಲವೇ ಪರಿಸರದಿಂದ ಬಂದಿರಬಹುದೇ ಹೊರತು ಶಿಕ್ಷಕರಿಂದ ಮಕ್ಕಳಿಗೆ ಬಂದಿಲ್ಲವೆಂದು ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ.