Posts Slider

Karnataka Voice

Latest Kannada News

ಮನೆ ಲೂಟಿ ಮಾಡಿ ಹೋದ: ಸಿಸಿಟಿವಿಯಲ್ಲಿ ಸೆರೆಯಾದ- ಲಿಂಗಸೂಗುರಲ್ಲಿನ ಘಟನೆ

1 min read
Spread the love

ರಾಯಚೂರು: ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿರುವ ಕಳ್ಳನೋರ್ವ ಮನೆಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೊರಗೆ ಹೊಗುವಾಗ ಸಿಸಿಟಿವಿಯಲ್ಲಿ ಸೆರೆಯಾಗಿರುವ ಪ್ರಕರಣ ಜಿಲ್ಲೆಯ ಲಿಂಗಸೂಗುರ ಪಟ್ಟಣದಲ್ಲಿ ನಡೆದಿದೆ.

ಪ್ರಶಾಂರ ಸಾಲಮನಿ ಎಂಬುವವರ ಮನೆಗೆ ನುಗ್ಗಿರುವ ಕಳ್ಳ 2.50ಲಕ್ಷ ರೂಪಾಯಿಯನ್ನ ಕಳ್ಳತನ ಮಾಡಿದ್ದಾನೆ. ಕದ್ದ ಹಣವನ್ನ ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿಕೊಂಡು ಹೊರಗೆ ಹೋಗುತ್ತಾನೆ. ಈ ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳ ಯಾರೆಂಬುದು ಗೊತ್ತಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ ಪೊಲೀಸರು ಈತ ಪಿಂಚಣಿಪುರ ಪ್ರದೇಶದ ಹನುಮಂತ ಎನ್ನುವುದನ್ನ ಖಚಿತಪಡಿಸಿ ಆರೋಪಿಯನ್ನ ಬಂಧನ ಮಾಡಿದ್ದಾರೆ.

ಪ್ರಶಾಂತ ಸಾಲಮನಿಯ ಮನೆಯೊಳಗೆ  ಹಣ ಇರುವುದನ್ನ ಮೊದಲೇ ಖಚಿತಪಡಿಸಿಕೊಂಡಿದ್ದ ಹನಮಂತ, ಕಳ್ಳತನ ಮಾಡಿ ಸಿಸಿಟಿವಿ ಕ್ಯಾಮರಾ ಮೂಲಕ ಸಿಕ್ಕಿಬಿದ್ದಿದ್ದು, ಲಿಂಗಸೂಗುರು ಠಾಣೆ ಪೊಲೀಸರು ಬಂಧನ ಮಾಡಿ ಮತ್ತಷ್ಟು ತನಿಖೆ ಮಾಡುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed