ನಮಗ್ಯಾರು ಒತ್ತಡ ಹಾಕಿಲ್ರೀ: ಶಾಸಕರ ವಿರುದ್ಧ ಮಾತಾಡೋದ್ ತಪ್ಪ: ರಾಬರ್ಟ್ ದದ್ಧಾಪುರಿ

ಧಾರವಾಡ: ಕಾಂಗ್ರೆಸ್ ಸಮಿತಿಯ ಕಾರ್ಮಿಕರ ಘಟಕದ ಅಧ್ಯಕ್ಷ ವಿಜಯ ಗುಂಟ್ರಾಳ ಉಚ್ಚಾಟನೆಯಲ್ಲಿ ನಮಗೆ ಯಾರೂ ಒತ್ತಡ ಹಾಕಿಲ್ಲವೆಂದು ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ರಾಬರ್ಟ್ ದದ್ಧಾಪುರಿ ಹೇಳಿದರು.
ವಿಜಯ ಗುಂಟ್ರಾಳ ಉಚ್ಚಾಟನೆ ಸಮಯದಲ್ಲಿ ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿಯೇ ನಡೆದಿದೆ. ಶಾಸಕ ಪ್ರಸಾದ ಅಬ್ಬಯ್ಯರ ಮೇಲೆ ಯಾವುದೇ ಆರೋಪಗಳಿದ್ದರೂ, ಅವುಗಳನ್ನ ಪಕ್ಷದಂಗಳದಲ್ಲಿ ಮಾತನಾಡಬೇಕಿತ್ತು. ಆದರೆ, ಅದನ್ನ ಗುಂಟ್ರಾಳ ಮಾಡಿಲ್ಲವೆಂದು ದದ್ಧಾಪುರಿ ಹೇಳಿದರು.
ಬೆಳಿಗ್ಗೆ ಎಲ್ಲ ಪತ್ರಿಕೆಗಳನ್ನ ತೆಗೆದುಕೊಂಡು ನೋಡಿದ ನಂತರವೇ ತೀರ್ಮಾನಕ್ಕೆ ಬಂದು ನಮ್ಮ ಅಭಿಪ್ರಾಯವನ್ನ ಪಕ್ಷದ ಅಧ್ಯಕ್ಷರಿಗೆ ಹೇಳಿದ್ದೇವೆ. ನಮಗೆ ಯಾರೂ ಒತ್ತಡ ಹಾಕಿಲ್ಲವೆಂದು ರಾಬರ್ಟ್ ಸ್ಪಷ್ಟವಾಗಿ ಹೇಳಿದರು.
ನಿನ್ನೆಯಷ್ಟೇ ವಿಜಯ ಗುಂಟ್ರಾಳ ಹೇಳಿಕೆ ನೀಡಿ, ಇವರನ್ನ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದರು.