ಧಾರವಾಡದಲ್ಲಿ ಕಣ್ಣೇದುರಿಗೆ ಕುಸಿದ ಮನೆ-ಹೊರಗೋಡಿ ಬಂದು ಜೀವ ಉಳಿಸಿಕೊಂಡರು..

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆ- ಪ್ರತಿಕ್ಷಣವೂ ಕಾಡುತ್ತಿರುವ ಕೊರೋನಾ ಬಡವರ ಬದುಕನ್ನ ಬೀದಿಗೆ ತರುತ್ತಿರುವುದು ನಿಲ್ಲುತ್ತಲೇ ಇಲ್ಲ. ನೂರೆಂಟು ಕನಸುಗಳಿಗೆ ಆಸರೆಯಾಗಿದ್ದ ಮನೆಯೊಂದು ಹಲವರ ಕಣ್ಣೇದುರಿಗೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಬದುಕಿದ್ದೇ ದೊಡ್ಡದೆಂದುಕೊಂಡು ಹೊರಗೋಡಿ ಜೀವ ಉಳಿಸಿಕೊಂಡ ಘಟನೆ ಧಾರವಾಡದ ಕಮಲಾಪುರದಲ್ಲಿ ನಡೆದಿದೆ.
ಮನೆ ಬೀಳುವ ದೃಶ್ಯ
ಜಡಿ ಮಳೆಯಂತೆಯೂ- ರಕ್ಕಸ ಮಳೆಯಂತೆಯೂ ಸುರಿಯುತ್ತಿರುವ ಮಳೆಯಿಂದ ನಗರದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕಮಲಾಪುರದ ಮನೆ ಬೀಳುವ ದೃಶ್ಯವನ್ನ ಪಕ್ಕದ ಮನೆಯವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕಮಲಾಪುರದ ಯಲ್ಲಪ್ಪ ಶಿವಪುತ್ರಪ್ಪ ತಿಕ್ಕುಂಡಿ ಎಂಬುವವರಿಗೆ ಸೇರಿದ ಮನೆಯೇ ಅನೇಕರ ಕಣ್ಣೇದುರಿಗೆ ದುಪ್ಪನೆ ಬಿದ್ದಿದೆ. ಒಳಗೆ ಇದ್ದವರು ಶಬ್ದದಿಂದ ಗಾಬರಿಯಾಗಿ ಹೊರಗೆ ಬಂದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.