50ಜನರ ಪ್ರಾಣ ಉಳಿಸಿದ್ದು ಹಾರೋಬೆಳವಡಿಯ ಸುಲ್ತಾನ: ಆ ಊರಿನ ಜನಾ ಏನು ಮಾಡಿದ್ದಾರೆ ಗೊತ್ತಾ..?

ಧಾರವಾಡ: ಕಳೆದ ಮೂರು ದಿನಗಳ ಹಿಂದೆ ಧಾರವಾಡದಿಂದ ಸವದತ್ತಿಗೆ ಹೋಗುವ ರಸ್ತೆಯಲ್ಲಿ ದುರಸ್ತಿಯಲ್ಲಿರುವ ರಸ್ತೆಯಲ್ಲೇ ವಾಹನ ಚಲಾಯಿಸಿಕೊಂಡು ಹೋಗಿ, 50ಕ್ಕೂ ಹೆಚ್ಚು ಜನರನ್ನ ಕ್ಷೇಮವಾಗಿ ಕರೆದುಕೊಂಡು ಚಾಲಕ, ತನ್ನ ಹುಟ್ಟೂರಲ್ಲಿ ಸುಲ್ತಾನನಾಗಿದ್ದಾರೆ. ಹೌದು.. ಇದನ್ನ ಪೂರ್ತಿ ನೋಡಿ ನಿಮಗೆ ಗೊತ್ತಾಗತ್ತೆ.
ಗ್ರಾಮಸ್ಥರು ಪ್ರೀತಿಯಿಂದ ಮಾಡಿದ ವೀಡಿಯೋ..
ಅವತ್ತು ಬೆಣ್ಣೆಹಳ್ಳದ ನೀರು ರಭಸವಾಗಿಯೇ ಹರಿಯುತ್ತಿತ್ತು. ಪ್ರಯಾಣಿಕರಲ್ಲಿ ಒಂದು ಕುಟುಂಬ ಬೇಗನೇ ತಮ್ಮೂರನ್ನೇ ತಲುಪಲೇಬೇಕಿತ್ತು. ಅದೇ ಕಾರಣಕ್ಕೆ ನೀರಲ್ಲೇ ಬಸ್ ಚಲಾಯಿಸಿ, ಒಂದು ಕಡೆ ಇನ್ನೇನು ಬಸ್ ಬಿದ್ದೇಬಿಡ್ತು ಅನ್ನುವಾಗಲೇ, ಎಕ್ಸಿಲೇಟರ್ ಶಬ್ದ ಮಾಡಿ ಬಸ್ ಮತ್ತೊಂದು ತುದಿಗೆ ಹೋಗಿತ್ತು. ಅಲ್ಲಿದ್ದವರು ಮತ್ತು ಒಳಗಡೆಯಿದ್ದ ಪ್ರಯಾಣಿಕರು ಫುಲ್ ಖುಷ್ ಆಗಿದ್ರು.
ಹಾಗೇ ಎಲ್ಲರೂ ನಿಟ್ಟುಸಿರು ಬಿಡುವಂತೆ ಮಾಡಿದ್ದು ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಸಾರಿಗೆ ಚಾಲಕ ಕೇದಾರ ಪಟದಾರಿ. ಇವರನ್ನೀಗ ಗ್ರಾಮಸ್ಥರು, ಸುಲ್ತಾನನೆಂದು ಬಿಂಬಿಸುತ್ತಿದ್ದಾರೆ.
ಕೇದಾರ ಪಟದಾರಿ 50ಜನರನ್ನಲ್ಲ 50 ಕುಟುಂಬಗಳ ನೆಮ್ಮದಿಯನ್ನ ಉಳಿಸಿದ್ದಾರೆ. ಇಂಥವರಿಗೆ ನಮ್ಮ ಕಡೆಯಿಂದಲೂ ಒಂದು ಸೆಲ್ಯೂಟ್.