ಬಸವನಬಾಗೇವಾಡಿ: ಕತ್ತಿ-ಬಿರಾದಾರ ಬಂಧನ: ಮಾಡಿದ ಅಪರಾಧವೇನು ಗೊತ್ತಾ..

ವಿಜಯಪುರ: ಒಬ್ಬಂಟಿಯಾಗಿ ಸಂಚರಿಸುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳರತನ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರದ ಕಲಕೇರಿ ಗ್ರಾಮದ ಶರಣಪ್ಪ ಸಿದ್ದಪ್ಪ ಕತ್ತಿ(27), ನಾಸೀರ ಅಹ್ಮದ ಪೀರಸಾಬ ಪಟೇಲ್ ಉರ್ಫ್ ಬಿರಾದಾರ(27) ಬಂಧಿತ ಆರೋಪಿಗಳು. ಬಂಧಿತ ಸರಗಳ್ಳರಿಂದ 34.67 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.
ಅಕ್ಟೋಬರ್ 3ರಂದು ಬಸವನಬಾಗೇವಾಡಿ ಪಟ್ಟಣದ ಐಡಿಎಪ್ಸಿ ಬ್ಯಾಂಕ್ ಹತ್ತಿರ ಅಂಗನವಾಡಿ ಕಾರ್ಯಕರ್ತೆ ಕಮಲಾ ಶಿವಪ್ಪ ರತ್ತಳ್ಳಿ ಎಂಬುವರ ಸರಗಳ್ಳತನ ಮಾಡಿದರು. ಈ ಕುರಿತು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾಹಿತಿ ನೀಡಿದ್ದಾರೆ.