ಹುಬ್ಬಳ್ಳಿಯಲ್ಲಿ ಮೂರು ಬೈಕ್ ಕಳ್ಳತನ

ಹುಬ್ಬಳ್ಳಿ: ನಗರದ ವಿವಿಧ ಪ್ರದೇಶಗಳಲ್ಲಿ ಮೂರು ಬೈಕಗಳನ್ನ ಕಳ್ಳತನ ಮಾಡಲಾಗಿದ್ದು, ಒಂದೇಡೆ ಮಟಕಾ, ಮತ್ತೊಂದೆಡೆ ಜೂಜಾಟವಾಡುವ ಪ್ರಕರಣವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮನೆಯ ಮುಂದೆ ಪಾರ್ಕ ಮಾಡಿದ ಪಲ್ಸರ್ ಬೈಕನ್ನ ಕಳ್ಳತನ ಮಾಡಲಾಗಿರುವ ಪ್ರಕರಣ ಎಪಿಎಂಸಿ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೇಶ್ವಾಪೂರ ಪೊಲೀಸ ಠಾಣೆ ವ್ಯಾಪ್ತಿಯ ಶಾಂತಿನಗರ ಐಯ್ಯಂಗಾರ ಬೇಕರಿ ಮುಂದೆ ಹ್ಯಾಂಡಲ್ ಲಾಕ್ ಮಾಡಿ ಸಂತೆಗೆ ಹೋಗಿದ್ದವರ ಟಿವಿಎಸ್ ಎಕ್ಸಲ್ ದ್ವಿಚಕ್ರ ವಾಹನವನ್ನ ಕಳ್ಳತನ ಮಾಡಲಾಗಿದ್ದು, ಪ್ರಕರಣ ಕೇಶ್ವಾಪುರ ಠಾಣೆಯಲ್ಲಿ ದಾಖಲಾಗಿದೆ.
ಮತ್ತೊಂದು ದ್ವಿಚಕ್ರ ವಾಹನವನ್ನ ಕಿಮ್ಸ್ ಆವರಣದಿಂದ ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ ಶಹರ ಪೊಲೀಸ ವ್ಯಾಪ್ತಿಯ ಜಕಣಿಬಾವಿ ಗುಡಿ ಹತ್ತಿರ ಮಟಕಾ ಆಡುತ್ತಿದ್ದ ವ್ಯಕ್ತಿಯನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತನಿಂದ 700ರೂಪಾಯಿ ಮತ್ತು ಮಟಕಾ ಸಲಕರಣೆಗಳನ್ನ ವಶಕ್ಕೆ ಪಡೆದಿದ್ದಾರೆ.
ಕಸಬಾಪೇಟ್ ಪೊಲೀಸ ಠಾಣೆ ವ್ಯಾಪ್ತಿಯ ಹಳೇಹುಬ್ಬಳ್ಳಿ ಟೊಂಗಳಿ ಪ್ಲಾಟದ ಬಯಲು ಜಾಗೆಯಲ್ಲಿ ಜೂಜಾಟವಾಡುತ್ತಿದ್ದ 8 ಜನರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 12780 ರೂಪಾಯಿ ಮತ್ತು ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆದಿದ್ದಾರೆ.