ಟಿವಿ9 ಮಾಜಿ ವರದಿಗಾರ ವಿಧಿವಶ: ಕುಟುಂಬಕ್ಕೆ ಸಹಾಯ ಮಾಡಿ..
1 min readಚೆನ್ನಪಟ್ಟಣ: ಉತ್ತಮ ಸಮಾಜದ ಕನಸು ಕಂಡು ಹಗಲಿರುಳು ದುಡಿದು ಕಾರ್ಯನಿರ್ವಹಿಸಿದ್ದ ಪತ್ರಕರ್ತ ಬದುಕಿಗೆ ಏನೂ ಮಾಡಿಕೊಳ್ಳದೇ, ಇಂದು ಬೆಳಗಿನ ಜಾವ ವಿಧಿವಶರಾಗಿರುವ ಘಟನೆ ನಡೆದಿದೆ.
ಟಿವಿ9 ಸಂಸ್ಥೆ ಕನ್ನಡ ಚಾನಲ್ ಆರಂಭಿಸಿದ ಬೆನ್ನಲ್ಲೇ ರಾಮನಗರ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದ ನಾಗರಾಜ (ರಾಜು) ಅನಾರೋಗ್ಯದಿಂದ ತೀರಿಕೊಂಡಿದ್ದು, ಇಂದು ಮಧ್ಯಾಹ್ನ ಚೆನ್ನಪಟ್ಟಣದ ಕನಕನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಉತ್ತಮ ಸಮಾಜದ ಭರವಸೆಯಿಂದಲೇ ಕಾರ್ಯನಿರ್ವಹಿಸುತ್ತ ಬಂದಿದ್ದ ನಾಗರಾಜು, ಅಲ್ಲಿ ಕೆಲಸ ಕಳೆದ ನಂತರ ಬೇರೆ ಕಡೆ ಕಾರ್ಯನಿರ್ವಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ಮಕ್ಕಳನ್ನ ಹೊಂದಿರುವ, ನಾಗರಾಜ ಕೊನೆವರೆಗೂ ಮಕ್ಕಳಿಗಾದರೂ ಏನನ್ನೂ ಮಾಡದೇ ಇರುವುದು ಪರಿಸ್ಥಿತಿಯ ಸೋಜಿಗವೆನ್ನಬಹುದು.
ಪತ್ರಕರ್ತರ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡಿಕೊಳ್ಳುತ್ತಾರೆ. ಆದರೆ, ಸತ್ಯ ಮಾತ್ರ ಕಠೋರವಾಗಿರತ್ತೆ. ನಾಗರಾಜನ ಕುಟುಂಬಕ್ಕೆ ಮಾನವೀಯ ಪತ್ರಕರ್ತರು ಸಹಾಯ ಮಾಡುವುದು ಒಳಿತು. ಆ ಕುಟುಂಬಕ್ಕೆ ಆಸರೆಯಾದರೇ, ಅವರಾದರೂ, ಇದ್ದಷ್ಟು ದಿನ ಚೆನ್ನಾಗಿ ಬದುಕುತ್ತಾರೆ..
ನಾಗಾ ಮಿಸ್ ಯೂ ..