ಅವಧಿ ಮುಗಿದರೂ ಮುಗಿದಿಲ್ಲ ಹಾರ-ತುರಾಯಿ ಮೋಜಿನಾಟ- ರಾಜಕಾರಣಿಗಳನ್ನೂ ಮೀರಿಸಿದ ಪ್ರಚಂಡರು..!
ಬೆಂಗಳೂರು: ಅದಾಗಲೇ ಅಧಿಕಾರವಧಿ ಮುಗಿದು ಬರೋಬ್ಬರಿ ನಾಲ್ಕು ತಿಂಗಳಾಯಿತು. ಆದರೂ, ಇವರಿನ್ನೂ ಹಾರ-ತುರಾಯಿಯ ಮನಸ್ಸಿಚ್ಚೆಯನ್ನ ಬಿಟ್ಟುಕೊಟ್ಟಿಲ್ಲ. ಹೋದಲ್ಲಿ.. ಬಂದಲ್ಲಿ.. ಯಾವುದೇ ಪ್ರಚಾರದ ಕೊರತೆ ಇಲ್ಲದೇ ನಡೆಯುತ್ತಿದ್ದಾರೆ.. ಅಂದ ಹಾಗೇ ಇವರೆಲ್ಲ ಯಾರೂ ಎಂದು ನೀವೂ ಕೇಳಿದರೇ ಹೌಹಾರಿಬಿಡ್ತೀರಾ..
ಮೇಲಿರುವ ಭಾವಚಿತ್ರದಲ್ಲಿ ಕಾಣುವವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷ (ಪೇಟಾ) ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರು ಇಷ್ಟೊಂದು ಮಾಲೆ ಹಾಕಿಕೊಂಡು ನಿಂತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹೀಗೂ ಇರಬಹುದು ಎನ್ನುವುದಕ್ಕೆ ಸಾಕ್ಷಿಯಂಬಂತೆ ಈ ಭಾವಚಿತ್ರ ಕಾಣತ್ತೆ.
ರಾಜಕಾರಣಿಗಳು ತಮ್ಮ ಮತದಾರರ ಒತ್ತಾಯಕ್ಕೋ, ಪ್ರೀತಿಗೋ ಮಾಲೆಗಳನ್ನ ಹಾಕಿಕೊಳ್ಳುವುದು ಮೊದಲಿಂದಲೂ ನಡೆದುಕೊಂಡು ಬಂದ ರೂಢಿ. ಆದರೆ, ಸರಕಾರಿ ನೌಕರರೇ ಹೀಗೆ ರಾಜಾರೋಷವಾಗಿ ಪ್ರಚಾರಕ್ಕೆ ಇಳಿದುಬಿಟ್ಟರೇ ಗತಿಯೇನು.
ಶಿಕ್ಷಕ ವಲಯವೆಂದರೇ, ಎಲ್ಲರೂ ಗೌರವಿಸುವ, ಪ್ರೀತಿಸುವ ವರ್ಗವಿದೆ. ಅಲ್ಲಿಯೂ ರಾಜಕಾರಣಿಗಳಂತೆ ನಡೆದುಕೊಂಡರೇ ಗತಿಯೇನು. ಪ್ರಜ್ಞಾವಂತರೇ ಹೀಗೆ ನಡೆದುಕೊಳ್ಳುವುದು ಸೂಕ್ತವಾ ಎನ್ನುವುದನ್ನ ತಿಳಿದುಕೊಳ್ಳಬೇಕು. ಕೋವಿಡ್-19 ಸಮಯದಲ್ಲೂ ಮಾಲೆಯ ಹಣವನ್ನ ಬಡವರಿಗೆ ಕೊಟ್ಟಿದ್ದರೇ ಮೂರೋತ್ತು ಊಟವಾದರೂ ಸಿಗುತ್ತಿತ್ತೇನೋ.. ಶಿಕ್ಷಕ ದೇವೋ ಭವ..