Posts Slider

Karnataka Voice

Latest Kannada News

ಪ್ರತಿ ಶಿಕ್ಷಕರಿಗೂ ಕೊರೋನಾ ಟೆಸ್ಟ್ ಕಡ್ಡಾಯ: ಆದೇಶದಲ್ಲಿ ಏನೇನಿದೆ ಗೊತ್ತಾ..?

Spread the love

ದಾವಣಗೆರೆ: ವಿದ್ಯಾಗಮ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಶಿಕ್ಷಕರುಗಳು ಕಡ್ಡಾಯವಾಗಿ ಕೋವಿಡ್-19 ತಪಾಸಣೆಗೆ ಒಳಗಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರ ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ಸೋಂಕು ಜಿಲ್ಲೆಯಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕಿಗೆ ಕೆಲವು ಕಾರ್ಯನಿರತ ಶಿಕ್ಷಕರು ಬಲಿಯಾಗಿರುವುದು ದುಃಖಕರ ವಿಷಯವಾಗಿದೆ ಎಂದು ಡಿಡಿಪಿಐ ಬೇಸರ ವ್ಯಕ್ತಪಡಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಶಿಕ್ಷಕರು ಅಕ್ಟೋಬರ್ 30ರೊಳಗೆ ಕೋವಿಡ್-19 ಆರ್.ಟಿ.ಪಿ.ಸಿ.ಆರ್ ತಪಾಸಣೆಗೆ ಒಳಗಾಗಬೇಕು. ಹಲವು ಶಿಕ್ಷಕ ಸಂಘಗಳು ಉಚಿತ ತಪಾಸಣೆಯನ್ನ ಆಯೋಜನೆ ಮಾಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.

ಈ ಬಗ್ಗೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ಮಾಡಿರುವ ಡಿಡಿಪಿಐ, ತಪಾಸಣೆಗೆ ಒಳಪಡದೇ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ಹಾಗೂ ಶಿಕ್ಷಕರ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅನ್ವಯ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ವಿದ್ಯಾಗಮ ಯೋಜನೆಯ ತಾತ್ಕಾಲಿಕವಾಗಿ ರದ್ದು ಮಾಡಿರುವ ಮೊದಲೇ ಮಾಡಬೇಕಾಗಿದ್ದ ಇಲಾಖೆ, ಈಗಲಾದರೂ ಎಚ್ಚೆತ್ತಿರುವುದು ಒಳ್ಳೆಯ ವಿಚಾರವಾಗಿದೆ.


Spread the love

Leave a Reply

Your email address will not be published. Required fields are marked *