ಶಾಣ್ಯಾ ಮಂದಿನೂ ಓಟ್ ಹಾಕದೇ ದೂರ ಉಳಿಬ್ಯಾಡಿ- ಮತ ಹಾಕಿ ಉತ್ತಮ ಆಯ್ಕೆ ಮಾಡಿ
1 min readಧಾರವಾಡ: ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಮತದಾನ ಆರಂಭವಾಗಿದೆ. ಇಂದಾದರೂ ಮನೆ ಬಿಟ್ಟು ಹೋಗಿ ಮತದಾನ ಮಾಡಿ, ಉತ್ತಮ ಅಭ್ಯರ್ಥಿಯನ್ನ ಆಯ್ಕೆ ಮಾಡಿ, ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನ ಚಲಾವಣೆ ಮಾಡಿ.
ಪಶ್ಚಿಮ ಪದವೀಧರ ಕ್ಷೇತ್ರವೂ ಸೇರಿದಂತೆ ರಾಜ್ಯದ ನಾಲ್ಕು ಕಡೆ ಇಂದು ಮತದಾನ ನಡೆಯುತ್ತಿದ್ದು, ಎಲ್ಲರೂ ವಿಧ್ಯಾವಂತರೇ ಮತದಾನ ಮಾಡಬೇಕಿದೆ. ಸಾರ್ವತ್ರಿಕ ಚುನಾವಣೆಗಳಲ್ಲೂ ಮತದಾನ ಕಡಿಮೆಯಾಗುತ್ತಲೇ ಬರುತ್ತಿದೆ. ಹಾಗಾಗಿ, ಪ್ರಜ್ಞಾವಂತರು ಎನಿಸಿಕೊಂಡಿರುವರಾದರೂ ಮತದಾನ ಮಾಡಿ, ಜಾಗೃತಿ ಮೂಡಿಸಬೇಕಾಗಿದೆ.
ಕಳೆದ ಬಾರಿ ಚುನಾವಣೆಗಿಂತ ಈ ಬಾರಿ ಮತದಾರರ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಾಗಿ, ಕಳೆದ ಬಾರಿಗಿಂತ ಈ ಸಲ ಚುನಾವಣೆಯ ಕಾವು ಹೆಚ್ಚಾಗಿದೆ. ಕೊರೋನಾ ಮಹಾಮಾರಿಯ ನಡುವೆಯೂ ನಡೆಯುತ್ತಿರುವ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ.
ವಿಧಾನಪರಿಷತ್ ಚುನಾವಣೆಗೆ ಮತದಾನ ಮಾಡುತ್ತಿರುವ ಪದವೀಧರರೇ, ಶಿಕ್ಷಕರೇ ಮನೆಯಿಂದ ಹೊರಗೆ ಬನ್ನಿ. ಮತದಾನ ಮಾಡಿ, ನಿಮಗೆ ಇಷ್ಟವಾದ ಅಭ್ಯರ್ಥಿಗಳಿಗೆ ಮತವನ್ನ ಹಾಕಿ. ತಾವೂ ಪ್ರಜ್ಞಾವಂತರೂ ಮತ್ತೂ ಸಂವಿಧಾನದ ಆಶಯವನ್ನ ಗೌರವಿಸೋರು ಎನ್ನುವುದನ್ನ ಮತದಾನ ಮಾಡುವ ಮೂಲಕ ಸಾಬೀತುಪಡಿಸಿ.