ನವೆಂಬರ್ 30ರ ವರೆಗೂ ಶಾಲೆಗಳನ್ನ ತೆರೆಯುವಂತಿಲ್ಲ- ಕೇಂದ್ರದ ಆದೇಶ
1 min readನವದೆಹಲಿ: ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಹಲವು ಗೊಂದಲಗಳಿದ್ದು, ಈಗಾಗಲೇ ಕರ್ನಾಟಕದಲ್ಲಿ ನವೆಂಬರ್ ಎರಡನೇಯ ವಾರದಲ್ಲಿ ಪದವಿ ಕಾಲೇಜುಗಳನ್ನ ಆರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ನಡುವೆ ನವೆಂಬರ್ 30ರ ವರೆಗೆ ಕಡ್ಡಾಯವಾಗಿ ಶಾಲೆಗಳನ್ನ ಆರಂಭಿಸದಂತೆ ಆದೇಶ ಮಾಡಿದೆ.
ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನ ಆರಂಭಿಸಬೇಕೋ ಇಲ್ಲವೋ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರದ ಗೃಹ ಇಲಾಖೆಯ ಕಾರ್ಯದರ್ಶಿ ಆದೇಶವನ್ನ ಹೊರಡಿಸಿದ್ದಾರೆ.
ಪ್ರಾಥಮಿಕ ಶಾಲೆಗಳನ್ನ ಆರಂಭಿಸುವ ಕುರಿತು ಈಗಾಗಲೇ ಪಾಲಕರು ಬೇಡವೆಂದು ಅಭಿಪ್ರಾಯಪಟ್ಟಿದ್ದರು. ಕರ್ನಾಟಕದಲ್ಲಿ ಈಗಾಗಲೇ ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಈ ನಡುವೆ ಕೇಂದ್ರದ ಆದೇಶ ಹೊರಗೆ ಬಂದಿದ್ದು, ಶಾಲೆಗೆ ಮಕ್ಕಳನ್ನ ಹೇಗೆ ಕಳಿಸುವುದು ಎಂದುಕೊಂಡ ಪಾಲಕರಿಗೆ ನಿರಾಳವಾಗಿದೆ. ರಾಜ್ಯದಲ್ಲಿ ನವೆಂಬರ್ 3ರ ನಂತರ ಮತ್ತೆ ವಿದ್ಯಾಗಮ ಆರಂಭವಾಗತ್ತಾ ಎಂಬುದು ಕೂಡಾ ಯಕ್ಷಪ್ರಶ್ನೆಯಾಗಿದೆ.