ಮೂವರು ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್-ವರ್ಗಾವಣೆ
ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಮೋಷನ್ ನೀಡಿ ಸರಕಾರ ಆದೇಶ ಹೊರಡಿಸಿದ್ದು, ಪ್ರಮುಖವಾಗಿ ಅಮರಕುಮಾರ ಪಾಂಡೆಯವರಿಗೆ ಪ್ರಮೋಷನ್ ನೀಡಿ ಅವರನ್ನ ಡಿಜಿಪಿ ಟ್ರೇನಿಂಗ್ ಗೆ ವರ್ಗಾವಣೆ ಮಾಡಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಯಾಗಿದ್ದ ಪಾಂಡೆಯವರಿಗೆ ಪ್ರಮೋಷನ ನೀಡಲಾಗಿದೆ. ಎಸಿಬಿಯಲ್ಲಿ ಎಡಿಜಿಪಿಯಾಗಿದ್ದ ಟಿ.ಸುನೀಲಕುಮಾರ ಅವರಿಗೂ ಪ್ರಮೋಷನ್ ನೀಡಿ, ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ಐಪಿಎಸ್ ಪ್ರತಾಪರೆಡ್ಡಿ ಅವರಿಗೂ ಪ್ರಮೋಷನ್ ದೊರೆತಿದ್ದು, ಅಮರಕುಮಾರ ಪಾಂಡೆ ಅವರಿಂದ ತೆರವಾದ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.