ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿ ಬೀದಿಯಲ್ಲಿ ಸಂಜೀವ ಡುಮಕನಾಳ- ಕನ್ನಡ ತೇರು ಎಳೆಯಲು ಹೇಗಿದೆ ಗೊತ್ತಾ ತಯಾರಿ..!
ಹುಬ್ಬಳ್ಳಿ: ಇಂದು ಬೆಳ್ಳಂಬೆಳಿಗ್ಗೆ ಸಂಗ್ರಾಮ ಸೇನೆಯ ಪಟಾಲಂ ಹುಬ್ಬಳ್ಳಿಯ ಪ್ರಮುಖ ಬೀದಿಯಲ್ಲಿ ಸ್ವಚ್ಚತೆಯನ್ನ ಮಾಡುತ್ತಿತ್ತು. ಮುರಿದು ಬಿದ್ದು ಕಟ್ಟೆಗಳನ್ನ ಸುಧಾರಣೆ ಮಾಡುವುದಕ್ಕೆ ಟೊಂಕ ಕಟ್ಟಿ ನಿಂತಿದ್ದು, ನಾಳೆ ಕನ್ನಡದ ಕಂಕಣ ಕಟ್ಟಲು..
ಹೌದು ಕರ್ನಾಟಕ ರಾಜ್ಯೋತ್ಸವವನ್ನ ವಿಭಿನ್ನವಾಗಿ ಆಚರಣೆ ಮಾಡಲು ಮುಂದಾಗಿರುವ ಸಂಗ್ರಾಮ ಸೇನೆಯ ರಾಜ್ಯಾಧ್ಯಕ್ಷ ಸಂಜೀವ ಡುಮಕನಾಳ, ನಗರದ ಬೀದಿ ಬೀದಿಯಲ್ಲಿ ಸ್ವಚ್ಚತೆಯನ್ನ ಮಾಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನ, ಪಾಲಿಕೆ ಮಾಡುವ ಮುನ್ನವೇ ಮಾಡಿ ಮುಗಿಸಿದ್ದಾರೆ.
ಕನ್ನಡದ ಕಂಕಣ ಕಟ್ಟುವ ಮೂಲಕ ಆಚರಣೆಗೆ ಮುಂದಾಗಿರುವ ಸಂಜೀವ ಡುಮಕನಾಳ, ಕೊರೋನಾ ವಾರಿಯರ್ ಕಡೆಯಿಂದ ಧ್ವಜಾರೋಹಣ ಮಾಡಿಸುತ್ತಿದ್ದಾರೆ. ಡಾ. ದೀಪಕ ಕಲಾದಗಿ, ಕನ್ನಡದ ಧ್ವಜಾರೋಹಣ ಮಾಡುವ ಮೂಲಕ ನಾಳೆ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ.
ಕನ್ನಡದ ತೇರು ಎಳೆಯಲು ತನ್ನ ಮನೆಯ ಅಂಗಳವನ್ನ ತಾನೇ ಸ್ವಚ್ಚ ಮಾಡಿಕೊಳ್ಳುವ ಮೂಲಕ ಕನ್ನಡಿಗರಿಗೆ ಹೆಮ್ಮೆ ಮೂಡಿಸುವ ಕೆಲಸ ಮಾಡಿರುವ ಸಂಜೀವನಂತ ಯುವಕರ ಸಂಖ್ಯೆ ಹೆಚ್ಚಾಗಲಿ ಎನ್ನುವುದು ಹಲವರ ಬಯಕೆ.
ಇಂದಿನ ಸ್ವಚ್ಚತಾ ಅಭಿಯಾನದಲ್ಲಿ ರಾಜ್ಯಾಧ್ಯಕ್ಷ ಸಂಜೀವ ಡುಮಕನಾಳ ಜೊತೆಗೆ ತಾಲೂಕು ಅಧ್ಯಕ್ಷ ಸಾತಪ್ಪ ಕುಂಕೂರ, ಉಪಾಧ್ಯಕ್ಷ ಶಂಕರಗೌಡ ಭಾವಿಕಟ್ಟಿ ಸಾಥ್ ನೀಡಿದ್ದರು.