ಅಲ್ಲೊಂದ್-ಇಲ್ಲೊಂದ್ ಮಾಡಬ್ಯಾಡ್ರೀ- ಜೆಡಿಎಸ್ ಕಿವಿ ಮಾತೇಳಿದ ಜಿಲ್ಲಾಧ್ಯಕ್ಷ

ಹುಬ್ಬಳ್ಳಿ: ಜಾತ್ಯಾತೀತ ಜನತಾದಳದ ನಿಲುವು ಜಿಲ್ಲೆಯಲ್ಲಿ ಒಂದೇ ಇರಬೇಕು. ಅಲ್ಲೊಂದು ಇಲ್ಲೊಂದು ಮಾಡುವುದು ಒಳಿತಲ್ಲ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.
ಜಿಲ್ಲೆಯ ಅಳ್ನಾವರ ಮತ್ತು ನವಲಗುಂದ ಪುರಸಭೆ ಚುನಾವಣೆಯ ನಂತರ ಮಾತನಾಡಿದ ಅನಿಲಕುಮಾರ ಪಾಟೀಲ, ಅಳ್ನಾವರದಲ್ಲಿ 6 ಸದಸ್ಯರನ್ನ ಹೊಂದಿದ್ದ ಜೆಡಿಎಸ್ 3 ಸದಸ್ಯರಿರುವ ಬಿಜೆಪಿಗೆ ಸಪೋರ್ಟ್ ಮಾಡಿದೆ. ಅದೇ ಪಕ್ಷ ನವಲಗುಂದದಲ್ಲಿ ಬೇರೆ ಥರದ ರೀತಿಯಲ್ಲಿ ನಡೆದುಕೊಳ್ಳುತ್ತಿದೆ.
ಜೆಡಿಎಸ್ ನಡೆದುಕೊಳ್ಳುವುದಿದ್ದರೇ ಒಂದೇ ಥರದಲ್ಲಿ ನಡೆದುಕೊಳ್ಳಲಿ. ಅದನ್ನ ಬಿಟ್ಟು ಅಲ್ಲೊಂದು ಇಲ್ಲೊಂದು ಮಾಡುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದ ಪಾಟೀಲ, ಜಾತ್ಯಾತೀತ ಮನೋಭಾವನೆ ಹೊಂದಿದ್ದರೇ ಹಾಗೇ ನಡೆದುಕೊಳ್ಳಬೇಕೆಂದರು.
ಜೆಡಿಎಸ್ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರ ಜೊತೆಗೂಡಲು ನವಲಗುಂದದ ಯಾವೊಬ್ಬರ ಸದಸ್ಯರು ಒಪ್ಪಲೇ ಇಲ್ಲ. ಹಾಗಾಗಿಯೇ, ನಾವೂ ಅವರಿಂದ ದೂರವುಳಿದಿದ್ದು. ನಮ್ಮನ್ನ ಕೇಳಿದ್ದನ್ನ ಸ್ವಾಗತಿಸುತ್ತೇವೆ ಎಂದು ಅನಿಲಕುಮಾರ ಪಾಟೀಲ ಹೇಳಿದರು.