ಶೈಕ್ಷಣಿಕ ಸಮ್ಮೇಳನ: ಯಾರ್ ಮಾಡ್ತಿದ್ದಾರೆ ಗೊತ್ತಿಲ್ಲ- ಶಿಕ್ಷಕರು ಭಾಗವಹಿಸಿದ್ರೇ ಪಕ್ಕಾ ಕ್ರಮ- ಡಿಡಿಪಿಐ ಪ್ರಸನ್ನಕುಮಾರ
1 min readವಿಜಯಪುರ: ಗುಮ್ಮಟನಗರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ ನಡೆಸುತ್ತಿರುವುದು ನನಗೆ ಗೊತ್ತೆಯಿಲ್ಲ. ಪರವಾನಿಗೆಯನ್ನೂ ನಮ್ಮಿಂ ದ ಪಡೆದಿಲ್ಲ. ಇದರಲ್ಲಿ ಯಾವುದೇ ಶಿಕ್ಷಕರು ಪರವಾನಿಗೆ ಇಲ್ಲದೇ ಭಾಗವಹಿಸಿದ್ರೇ ಕ್ರಮ ಜರುಗಿಸುವುದಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಸನ್ನಕುಮಾರ ಕರ್ನಾಟಕವಾಯ್ಸ್ ಗೆ ತಿಳಿಸಿದ್ದಾರೆ.
ಗುಮ್ಮಟನಗರಿಯಲ್ಲಿ ಜಿಲ್ಲಾ ಶೈಕ್ಷಣಿಕ ಸಮ್ಮೇಳನಕ್ಕೆ ಅನುಮತಿ ನೀಡಿಲ್ಲ. ಯಾರೂ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ ಎಂದ ಡಿಡಿಪಿಐ ಪ್ರಸನ್ನಕುಮಾರ, ಸಮ್ಮೇಳನದಲ್ಲಿ ಶಿಕ್ಷಕರು ಭಾಗಿಯಾದ್ರೇ ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದ್ರು.
ಇಂದು ವಿಜಯಪುರ ಜಿಲ್ಲೆಯ ನಿಡಗುಂದಿಯ ಮಣಗೂರು ಫ್ರೌಡ ಶಾಲಾ ಆವರಣದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನಕ್ಕೆ ಅನುಮತಿ ನೀಡಿಲ್ಲ. ತಾಲೂಕು ತಹಶೀಲ್ದಾರ ಹಾಗೂ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು ಅಲ್ಲದೇ, ಮಹಾಮಾರಿ ಕೊರೋನಾ ವೈರಸ್ ಭೀತಿ ಹಿನ್ನೆಲೆ ಕಾರ್ಯಕ್ರಮ ನಡೆಸಲು ಆದೇಶ ನೀಡಿಲ್ಲ ಶಿಕ್ಷಕರ ಸಮ್ಮೇಳನಕ್ಕೆ ಹೋದ್ರೆ 106A ಪ್ರಕಾರ ಕ್ರಮ ಕೈಕೊಳ್ಳಲಾಗುವುದು ಎಂದು ಡಿಡಿಪಿಐ ಪ್ರಸನ್ನಕುಮಾರ ಎಚ್ಚರಿಸಿದ್ದಾರೆ.
ಶೈಕ್ಷಣಿಕ ಸಮಾವೇಶದಲ್ಲಿ ಪರವಾನಿಗೆ ತೆಗೆದುಕೊಳ್ಳದೇ ಭಾಗವಹಿಸುವ ಶಿಕ್ಷಕರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್ ಸಿ ಮತ್ತು ಸಿಆರ್ ಸಿಗಳು ಜಾಗೃತೆ ವಹಿಸಿದ್ದಾರೆ. ಯಾರೇ ಪರವಾನಿಗೆ ಪಡೆಯದೇ ಭಾಗವಹಿಸಿದ್ರೇ ಕ್ರಮ ಗ್ಯಾರಂಟಿ ಎಂದು ಕರ್ನಾಟಕವಾಯ್ಸ್.ಗೆ ಡಿಡಿಪಿಐ ತಿಳಿಸಿದರು.