ನವಲೂರು ಸೇತುವೆ ಮೇಲೆ ದುರ್ಮರಣ: ಪ್ರಕರಣ ದಾಖಲು

ಧಾರವಾಡ: ಸಮೀಪದ ನವಲೂರು ಸೇತುವೆ ಬಳಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ನಡೆದಿದೆ.
ವಿನಾಯಕ ರಂಗ್ರೇಜಿ ಎಂಬುವವರಿಗೆ ಸೇರಿದ ಸ್ಕೂಟಿಗೆ ಬಸ್ ಮುಂಭಾಗ ಬಡಿದು, ಸವಾರನ ತಲೆಯ ಮೇಲೆ ಹಾಯ್ದಿದೆ. ತೀವ್ರ ರಕ್ತಸ್ರಾವವಾಗಿ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಪ್ರಮುಖವಾದ ಸೇತುವೆ ಮೇಲೆಯೇ ಘಟನೆ ನಡೆದಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಕೂಡಾ ಅಸ್ತವ್ಯಸ್ತಗೊಂಡಿತ್ತು. ಧಾರವಾಡ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತ ದೇಹವನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸಾವಿಗೀಡಾಗಿರುವ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಸಾರಿಗೆ ಬಸ್ ಚಾಲಕನ ವಿಚಾರಣೆ ಮಾಡುತ್ತಿದ್ದಾರೆ.