ರಮೇಶ ಭಾಂಡಗೆ ಕೊಲೆ: 9 ಲಕ್ಷಕ್ಕಾಗಿ ನಡೆಯಿತು ಹತ್ಯೆ

ಹುಬ್ಬಳ್ಳಿ: ನಿನ್ನೆ ಹಾಡುಹಗಲೇ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ದಶಕಗಳ ಹಿಂದೆ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಹಳೇಯ ರೌಡಿ ಷೀಟರ್ ಹಾಗೂ ಆರ್ ಟಿಐ ಕಾರ್ಯಕರ್ತ ರಮೇಶ ಭಾಂಡಗೆಯನ್ನ ನಿನ್ನೆ ದುರ್ಗದಬೈಲ್ ಸಮೀಪವೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.
ನಡು ಮಧ್ಯಾಹ್ನವೇ ನಡೆದ ಈ ಘಟನೆ ವಾಣಿಜ್ಯನಗರದಲ್ಲಿ ಮತ್ತಷ್ಟು ಆತಂಕವನ್ನ ಸೃಷ್ಟಿ ಮಾಡಿತ್ತು. ಕೊಲೆ ನಡೆದ ಸ್ಥಳದಲ್ಲಿ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು ಕೂಡಾ. ಇವುಗಳನ್ನ ಬೆನ್ನು ಹತ್ತಿ ಪೊಲೀಸರು ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಎಸ್ಸಾರ್ಟಿಸಿ ನೌಕರನೆಂದು ಹೇಳಲಾದ ರಿಯಾಜ್ ಬಂಕಾಪುರ ಎಂಬಾತನೇ ಕೊಲೆ ಮಾಡಿರುವ ಆರೋಪಿ ಎಂದು ಹೇಳಲಾಗಿದ್ದು, ಸೈಟ್ ಕೊಡುವ ಸಂಬಂಧ ರಮೇಶ ಭಾಂಡಗೆ ರಿಯಾಜ್ 9ಲಕ್ಷ ರೂಪಾಯಿ ಕೊಟ್ಟಿದ್ದ. ಈ ಬಗ್ಗೆ ಇಬ್ಬರಲ್ಲೂ ಸಾಕಷ್ಟು ಬಾರಿ ಸಣ್ಣಪುಟ್ಟ ಜಗಳಗಳಾಗಿದ್ದವು. ಅದೇ ವಿಷಯವೇ ವಿಕೋಪಕ್ಕೆ ಹೋಗಿ, ಹತ್ಯೆಯಾಗಿದೆ.