ಹುಬ್ಬಳ್ಳಿ: ಸಾಕಿದ ನಾಯಿ ಕಡಿತ ಬೆರಳು ಕಟ್: ಕಂಗಾಲಾದ ಮಾಲೀಕ

ಹುಬ್ಬಳ್ಳಿ: ನಾಯಿ ನಿಯತ್ತಿಗೆ ಹೇಳಿ ಮಾಡಿಸಿದ ಪ್ರಾಣಿ. ಆದರೆ, ಇಲ್ಲೊಂದು ನಾಯಿ ತಾನೇ ಸಾಕಿದ ಮಾಲೀಕನನ್ನ ಕಡಿದು ಬೆರಳನ್ನ ಕಟ್ ಮಾಡಿದ ಘಟನೆ ನಗರದ ದೇಶಪಾಂಡೆನಗರದಲ್ಲಿ ಸಂಭವಿಸಿದ್ದು, ಮಾಲೀಕ ಬೆರಳನ್ನ ಕಳೆದುಕೊಂಡಿದ್ದಾರೆ.
ರಾಜು ಎಂಬ ಮಾಲೀಕ ಬೆಳಿಗ್ಗೆ ತಮ್ಮ ಎರಡು ನಾಯಿಗಳು ಜಗಳಕ್ಕೆ ಬಿದ್ದಿವೆ. ಅವುಗಳನ್ನ ಬಿಡಿಸಲು ಹೋದಾಗ ಹೋದಾಗ, ಒಮ್ಮೇಲೆ ಒಂದು ನಾಯಿ ಕೈಯನ್ನ ಹಿಡಿದಿದೆ. ಬಿಡಿಸಿಕೊಳ್ಳಲು ಪರದಾಡಿದಾಗ ಬೆರಳು ಅದರ ಬಾಯಲ್ಲಿಯೇ ಉಳಿದ ಪರಿಣಾಮ, ನಡು ಬೆರಳು ಕಟ್ ಆಗಿ ಕೆಳಗೆ ಬಿದ್ದಿದೆ. ಬಿದ್ದ ಬೆರಳಿನ ತುದಿಯ ಸಮೇತ ಮಾಲೀಕ ಆಸ್ಪತ್ರೆಗೆ ಆಗಮಿಸಿದ್ದರು.
ತುಂಡಾದ ಬೆರಳಿಗೆ ಚಿಕಿತ್ಸೆ ನೀಡಲಾಗಿದ್ದು, ತನ್ನ ಬೆರಳನ್ನ ಹೇಗಾದರೂ ಮಾಡಿ ಜೋಡಣೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾನೆ. ಸಂಪೂರ್ಣವಾಗಿ ಎರಡು ತುಂಡಾಗಿರುವ ಬೆರಳಿನ ಜೋಡಣೆಯ ಬಗ್ಗೆ ವೈಧ್ಯರು ಸಮಾಲೋಚನೆ ನಡೆಸುತ್ತಿದ್ದಾರೆ. ಮಾಲೀಕ ಮಾತ್ರ ತನ್ನ ಪ್ರೀತಿಯ ನಾಯಿಯಿಂದಲೇ ಬೆರಳು ಕಳೆದುಕೊಂಡು ಪರಿತಪಿಸುವಂತಾಗಿದೆ.
ಕಿಮ್ಸನಲ್ಲಿ ಬೆರಳಿಗೆ ಚಿಕಿತ್ಸೆ ನೀಡಲಾಗಿದೆ. ನಾಯಿ ಬಲವಾಗಿ ಬೆರಳನ್ನ ಹಿಡಿದು ಹಲ್ಲಿನಿಂದ ಕತ್ತರಿಸಿದ್ದು, ಚಿಕಿತ್ಸೆ ವೇಳೆಯಲ್ಲಿ ಗೊತ್ತಾಗಿದೆ.