Posts Slider

Karnataka Voice

Latest Kannada News

ವಕೀಲರ ಬಂಧನ ಪ್ರಕರಣ- ಐಜಿಪಿ ಉಪಸ್ಥಿತಿಯಲ್ಲಿ ವಿಚಾರಣೆ: ಅಧಿಕಾರಿಗಳ ಬದಲಾಗಿ ಪೊಲೀಸರ ಅಮಾನತ್ತು…?

Spread the love

ಧಾರವಾಡ: ನವನಗರ ಎಪಿಎಂಸಿ ಠಾಣೆಯ ಗೊಂದಲಕ್ಕೆ ಸೋಮವಾರದ ತನಕ ವಕೀಲರು ಗಡುವು ನೀಡಿದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪ್ರಭಾರಿಯಾಗಿರುವ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಪೊಲೀಸ್ ಇನ್ಸ್‌ ಪೆಕ್ಟರ ಸೇರಿದಂತೆ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.

ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ವಿಚಾರಣೆಗೆ ಇನ್ಸಪೆಕ್ಟರ್ ಪ್ರಭು ಸೂರಿನ್, ಪಿಎಸೈ ಜಕ್ಕನಗೌಡರ ಸೇರಿದಂತೆ ನವನಗರ ಠಾಣೆಯವರಂದ ಬಂಧಿತರಾದ ಪ್ರವೀಣ ಪೂಜಾರಿ, ಮಲ್ಲಯ್ಯ ಮಠಪತಿ ಹಾಗೂ ವಕೀಲ ವಿನೋದ ಪಾಟೀಲರನ್ನ ಬಂಧನ ಮಾಡಿದ, ನ್ಯಾಯಾಲಯಕ್ಕೆ ಕರೆದುಕೊಂಡು ಹೋದ ಪೊಲೀಸರನ್ನ ವಿಚಾರಣೆ ಮಾಡಲಾಗುತ್ತಿದೆ.


ಕಳೆದ ಎರಡು ಗಂಟೆಯಿಂದಲೂ ವಿಚಾರಣೆ ನಡೆಯುತ್ತಿದ್ದು, ಬಂಧನದ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ. ಈಗಾಗಲೇ ಇನ್ಸಪೆಕ್ಟರ್ ಸೂರಿನ್ ವಿರುದ್ಧ ವಕೀಲರು ಆರೋಪ ಮಾಡಿರುವುದರಿಂದ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.


ಸೋಮವಾರದೊಳಗೆ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕಾಗಿದ್ದು, ಅದಕ್ಕಾಗಿಯೇ ಈ ವಿಚಾರಣೆ ನಡೆಯುತ್ತಿದೆ. ಇಷ್ಟೇಲ್ಲ ನಡೆದ ಮೇಲೆ ಪೊಲೀಸರನ್ನ ಅಮಾನತ್ತು ಮಾಡಿ, ಅಧಿಕಾರಿಯನ್ನ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಂಜೆಯವರೆಗೆ ಈ ಬಗ್ಗೆ ನಿಖರವಾದ ಮಾಹಿತಿ ದೊರೆಯಲಿದ್ದು, ಎಪಿಎಂಸಿ ಠಾಣೆಯ ಗೊಂದಲ ಬಗೆಹರಿಯಬೇಕಿದೆ.


Spread the love

Leave a Reply

Your email address will not be published. Required fields are marked *