ವಿಜಯ ಸಂಕೇಶ್ವರ ಪ್ಲಾಂಟ್ ಬಳಿ ಲಾರಿ ಪಲ್ಟಿ- ಇಬ್ಬರು ಪವಾಡಸದೃಶ ರೀತಿಯಲ್ಲಿ ಪಾರು
1 min readಹುಬ್ಬಳ್ಳಿ: ರಾಜಧಾನಿಯಿಂದ ವಾಣಿಜ್ಯನಗರಿಗೆ ಕಬ್ಬಿಣದ ಸಾಮಗ್ರಿಗಳನ್ನ ಹೊತ್ತು ತರುತ್ತಿದ್ದ ಲಾರಿಯೊಂದು ಚಲಿಸುತ್ತಿದ್ದ ವಿರುದ್ಧ ದಿಕ್ಕಿನಲ್ಲಿ ತಿರುಗಿ ಬಿದ್ದಿದ್ದು, ಚಾಲಕ ಹಾಗೂ ಕ್ಲೀನರ್ ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ವರೂರು ಬಳಿ ಸಂಭವಿಸಿದೆ.
ಬೆಂಗಳೂರಿನ ಫಿರ್ದೋಸ್ ಜಹಾನ್ ಎನ್ನುವವರಿಗೆ ಸೇರಿದ ಲಾರಿಯಲ್ಲಿ ಲಕ್ಷಾಂತರ ಮೌಲ್ಯದ ಕಬ್ಬಿಣದ ಪರಿಕರಗಳನ್ನು ತೆಗೆದುಕೊಂಡು ಬರಲಾಗುತ್ತಿತ್ತು. ಹುಬ್ಬಳ್ಳಿ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ತೆರಳುವ ಮುನ್ನವೇ ಲಾರಿ ನಿಯಂತ್ರಣ ತಪ್ಪಿ ಉರುಳಿದೆ.
ಲಾರಿ ಚಾಲಕ ಮೊಹ್ಮದ ಹಾಗೂ ಕ್ಲೀನರ್ ರಮೇಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.
ಗೂಡ್ಸ್ ಲಾರಿಯು ರಸ್ತೆ ಮದ್ಯದಲ್ಲಿ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಲಾರಿಯನ್ನ ರಸ್ತೆಯ ಒಂದು ಭಾಗಕ್ಕೆ ಜಗ್ಗಿಸಿ, ಸಂಚಾರವನ್ನ ಸುಗಮಗೊಳಿಸಿದರು.