ಇರಾಣಿ ಕಾಲನಿಯವರು ನಮ್ಮಲ್ಲೇನು ಮಾಡಿಲ್ಲ- ಬೆಂಗಳೂರು ಪೊಲೀಸರು ನಮ್ಮ ಸಹಕಾರ ಕೇಳಿಲ್ಲ- ಹಾಗಾಗಿಯೇ.. ಡಿಸಿಪಿ ಬಸರಗಿ ಹೇಳಿಕೆ..

ಧಾರವಾಡ: ನಗರದಲ್ಲಿನ ಇರಾಣಿ ಕಾಲನಿಯವರು ನಮ್ಮ ವ್ಯಾಪ್ತಿಯಲ್ಲಿ ಏನೂ ಮಾಡಿಲ್ಲ. ಬೇರೆ ಕಡೆ ಕಳ್ಳತನ ಮಾಡಿ ಬರುತ್ತಾರೆ ಎಂದು ಸುದ್ದಿಯಿದೆ ಅಷ್ಟೇ. ಆದರೆ, ಈ ಬಗ್ಗೆ ನಮಗೇನು ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಬಸರಗಿ ಹೇಳಿದ್ದಾರೆ.
ಬೆಂಗಳೂರು ಪೊಲೀಸರ ಮೇಲೆ ಇರಾಣಿ ಗ್ಯಾಂಗಿನವರು ಹಲ್ಲೆ ಮಾಡಿರುವ ಕುರಿತು ಮಾತನಾಡಿದ ಡಿಸಿಪಿ ಬಸರಗಿ, ಬೇರೆ ಜಿಲ್ಲೆಯಿಂದ ಬಂದವರು ನಮ್ಮ ಸಹಕಾರ ತೆಗೆದುಕೊಂಡು ಮಾಡಬೇಕಿತ್ತು. ಅವರು ಮಪ್ತಿಯಲ್ಲಿ ಇದ್ದಿದ್ದರಿಂದ ಹಾಗೇ ಆಗಿರಬಹುದು ಎಂದು ಹೇಳಿಕೆ ನೀಡಿದ್ರು.
EXCLUSIVE BYTE
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನ ಬಂಧನ ಮಾಡಲಾಗಿದೆ. ಆದರೆ, ಬೇರೆ ಜಿಲ್ಲೆಯ ಪೊಲೀಸರು ಬಂದಾಗ ನಮ್ಮ ಗಮನಕ್ಕೆ ತಂದು ಕಾರ್ಯಾಚರಣೆ ಮಾಡಿದರೇ ಒಳ್ಳೆಯದಾಗತ್ತೆ. ಇಲ್ಲದಿದ್ದರೇ ಇಂತಹ ಅವಘಡಗಳು ಸಂಭವಿಸುತ್ತವೆ ಎಂದರು.
ಇರಾಣಿ ಕಾಲನಿಯಲ್ಲಿನ ಕಳ್ಳರ ಬಗ್ಗೆ ಹೆಚ್ಚು ಮಾತನಾಡದೇ, ಬೇರೆ ಜಿಲ್ಲೆಯ ಪೊಲೀಸರು ಒಳಗೆ ಬರುವುದಾದರೇ ಹೇಗೆ ಬರಬೇಕೆಂದು ಹೆಚ್ಚಿಗೆ ಮಾತನಾಡಿದ್ರು ಡಿಸಿಪಿ ಬಸರಗಿ.