ಬಡವರಿಗಾಗಿ ಅಧಿಕಾರಿಗಳನ್ನ ಬೆಂಡೆತ್ತಿದ ಶಾಸಕ ಅಮೃತ ದೇಸಾಯಿ-ಅಮಾನತ್ತು ಮಾಡಿ, ತನಿಖೆ ಮಾಡುವಂತೆ ಡಿಸಿಗೆ ಪತ್ರ
ಧಾರವಾಡ: ಬಿದ್ದ ಮನೆಗಳಿಗೆ ಪರಿಹಾರ ಕೊಡುವಲ್ಲಿ ಬಡವರಿಗೆ ಅನ್ಯಾಯ ಮಾಡಿದ್ದಲ್ಲದೇ ಕೆಲವು ಹೆಸರುಗಳನ್ನ ಬಿಟ್ಟು ತೊಂದರೆ ಕೊಡುತ್ತಿದ್ದ ಅಧಿಕಾರಿಗಳನ್ನ ಶಾಸಕ ಅಮೃತ ದೇಸಾಯಿ, ತಮ್ಮದೇ ಭಾಷೆಯಲ್ಲಿ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ವೈರಲ್ ವೀಡಿಯೋ ಇಲ್ಲಿದೆ ನೋಡಿ..
https://www.youtube.com/watch?v=gv3IYywxrCw
ಘಟನೆ ನಡೆದಿದ್ದು ಯಾವಾಗ ಎಂಬುದು ನಿಖರವಾಗಿ ತಿಳಿದು ಬಂದಿಲ್ಲವಾದರೂ, ಜನರಿಗೆ ಮಾಡುತ್ತಿರುವ ಅನ್ಯಾಯವನ್ನ ತಡೆಗಟ್ಟುವ ನಿಟ್ಟಿನಲ್ಲಿ ತಪ್ಪು ಮಾಡಿದ ಅಧಿಕಾರಿಗಳ ಬೆವರನ್ನ ಇಳಿಸಿದ್ದಾರೆ. ಈ ಎಲ್ಲ ದೃಶ್ಯಗಳು ವೈರಲ್ ಆಗಿದ್ದು, ಶಾಸಕ ಅಮೃತ ದೇಸಾಯಿ ಕ್ರಮ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಖುಷಿಯನ್ನ ಮೂಡಿಸಿದೆ.
ಬಡವರ ಹೋದರೇ, ತಮಗೆ ತಿಳಿದ ಹಾಗೇ ನಡೆದುಕೊಳ್ಳುವ ಅಧಿಕಾರಿಗಳಿಗೆ ಶಾಸಕರು ತಕ್ಕ ಪಾಠ ಕಲಿಸಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಶಾಸಕರಿಗೆ ಕರೆ ಮಾಡಿ, ಒಳ್ಳೆಯದನ್ನ ಮಾಡಿದ್ರೀ ಎಂದು ಶಹಬ್ಬಾಸ್ ಹೇಳುತ್ತಿದ್ದಾರೆಂದು ತಿಳಿದು ಬಂದಿದೆ.
ಈ ನಡುವೆ ತಪ್ಪು ಮಾಡಿರುವ ಕಂದಾಯ ನಿರೀಕ್ಷಕರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಮಾನತ್ತು ಮಾಡಿ, ಆಗಿರುವ ಪ್ರಮಾದದ ಬಗ್ಗೆ ತನಿಖೆ ಮಾಡುವಂತೆ ಶಾಸಕ ಅಮೃತ ದೇಸಾಯಿ ಮನವಿ ಮಾಡಿಕೊಂಡಿದ್ದಾರೆ.