ಕರ್ನಾಟಕ ಬಂದ್ ದಿನವೇ “ಹೊರಟ್ಟಿ ಮಾಸ್ತರ್” ಸತ್ಯಾಗ್ರಹ…!
1 min readಧಾರವಾಡ: ಶಿಕ್ಷಕರು ಹಾಗೂ ಸರಕಾರಿ ಶಾಲೆಗಳ ವಿವಿಧ ಬೇಡಿಕೆಗಳಿಗೆ ಸ್ಪಂಧಿಸುವಂತೆ ಆಗ್ರಹಿಸಿ ಕರ್ನಾಟಕ ಬಂದ್ ಕರೆ ನೀಡಿದ ದಿನವೇ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಹಾಲಿ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರು ಪ್ರತಿಭಟನೆ ಮಾಡಲು ಮುಂದಾಗಿದ್ದು, ಮಾಜಿ ಮಾಸ್ತರ್ ಹೋರಾಟಕ್ಕೆ ಹಲವರು ಸಾಥ್ ನೀಡಲಿದ್ದಾರೆ.
ಹೊಸ ಪಿಂಚಣಿ ವ್ಯವಸ್ಥೆಯನ್ನ ಕೈ ಬಿಟ್ಟು ಹಳೆಯ ಶಿಶ್ಚಿತ ಪಿಂಚಣೆಯನ್ನ ಜಾರಿಗೆ ತರಬೇಕು. ಸರಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ನೇಮಕವನ್ನ ಮಾಡಬೇಕು. 1995 ನಂತರದ ಖಾಸಗಿ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು. ಅನುದಾನ ರಹಿತ ಶಾಲಾ ನೌಕರರಿಗೆ ಸೇವಾ ಭದ್ರತೆಯನ್ನ ಒದಗಿಸಬೇಕೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಕ್ಕೆ ಕೂಡಲಿರುವ ಹೊರಟ್ಟಿಯವರಿಗೆ ವಿವಿಧ ಶಿಕ್ಷಕರ ಸಂಘಟನೆಗಳು ಕೂಡಾ ಸಾಥ್ ನೀಡಲಿವೆ. ಕೊರೋನಾ ಮಹಾಮಾರಿಯಿಂದ ಶಿಕ್ಷಣ ಇಲಾಖೆಯು ಕೂಡಾ ತಲ್ಲಣಗೊಂಡಿದ್ದು, ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಅನೇಕ ಸಂಕಷ್ಟಗಳನ್ನ ಅನುಭವಿಸಿದ್ದು, ಹೊರಟ್ಟಿಯವರ ಹೋರಾಟ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರಕಾರದ ಮೇಲೆ ಒತ್ತಡವನ್ನ ಹೆಚ್ಚು ಮಾಡಲಿದೆ.
ಮಾಜಿ ಮಾಸ್ತರ್ ಹೊರಟ್ಟಿಯವರು ಹೋರಾಟಕ್ಕೆ ಇಳಿದು ರಾಜ್ಯ ಸರಕಾರದ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಾರೆ ಎಂದು ಹೋರಾಟದ ನಂತರದ ಸರಕಾರದ ಭರವಸೆಗಳು ಉತ್ತರ ನೀಡಲಿವೆ.