ಸುಮ್ಮನೆ ಹೊರಟವನಿಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ-ಆತಂಕ ಮೂಡಿಸಿದ ಘಟನೆ
ಧಾರವಾಡ: ಬೆಳಗಾದರೇ ಬಸ್ ಬರುತ್ತದೆ ಎಂದು ಬೆಳಕಿಗಾಗಿ ಕಾಯುತ್ತಲೇ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಅಪರಿಚಿತ ವಾಹನ ಅಪಘಾತಪಡಿಸಿ, ಕಾಲು ಮುರಿದಿರುವ ಘಟನೆ ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಸಂಭವಿಸಿದೆ.
ಹುಸೇನಸಾಬ ರಾಜೇಸಾಬ ತಟಗಾರ ಎಂಬ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ವ್ಯಕ್ತಿಯ ಕಾಲು ಸಂಪೂರ್ಣವಾಗಿ ಮುರಿದು ಹೋಗಿದ್ದು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಧಾರವಾಡದಿಂದ ಗ್ರಾಮೀಣ ಬಸ್ ಗಳು ಬೆಳಿಗ್ಗೆ ಏಳು ಹದಿನೈದಕ್ಕೆ ಆರಂಭವಾಗುತ್ತಿದ್ದವು. ಆ ಕಾರಣಕ್ಕೆ ಹೊಸ ಬಸ್ ನಿಲ್ದಾಣದಲ್ಲಿಯೇ ಮಲಗಿದ್ದ ವ್ಯಕ್ತಿ ಬೆಳ್ಳಂಬೆಳಿಗ್ಗೆ ಹೊರಗಡೆ ವಾಕಿಂಗ್ ಮಾಡಲು ಹೋದಾಗ, ವೇಗವಾಗಿ ಬಂದು ಡಿಕ್ಕಿ ಹೊಡೆದು ವಾಹನ ಪರಾರಿಯಾಗಿದೆ.
ತೀವ್ರವಾಗಿ ಗಾಯಗೊಂಡಿರುವ ಹುಸೇನಸಾಬ ತಟಗಾರನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದ್ದು, ಪ್ರಕರಣದ ಬಗ್ಗೆ ಸಂಚಾರಿ ಠಾಣೆ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದಾರೆ.