ಹುಚ್ಚು ನಾಯಿ ಕಡಿತ: ಹುಚ್ಚನಂತಾದ ಮನುಷ್ಯ.. ನೀವೂ ಈತನ ಸ್ಥಿತಿ ನೋಡಿದ್ರೇ ಕಣ್ಣೀರಾಗ್ತೀರಿ..

ಹುಬ್ಬಳ್ಳಿ; ಆತ ಎಲ್ಲರಂತೆಯೇ ಜೀವನ ನಡೆಸುತ್ತಿದ್ದ. ತನ್ನ ಮಕ್ಕಳನ್ನ ಎಲ್ಲಿಲ್ಲದ ಪ್ರೀತಿಯಿಂದ ಸಾಕಿ, ಅಕ್ಕಪಕ್ಕದವರು ಹುಬ್ಬೇರಿಸುವಂತೆ ಜೀವನ ನಡೆಸುತ್ತಿದ್ದ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಬದುಕನ್ನ ಕಟ್ಟಿಕೊಂಡಿದ್ದ. ಆದರೆ, ವಿಧಿ ಆತನ ಜೀವನದಲ್ಲಿ ಕಟ್ಟಾಟವನ್ನ ಆಡಿ ಬಿಟ್ಟಿದೆ. ಚೆನ್ನಾಗಿದ್ದವ ಇವತ್ತು ಅರೆಹುಚ್ಚನಂತಾಗಿದ್ದಾನೆ. ಯಾಕೆ ಅನ್ನೋದನ್ನ ಇದನ್ನ ಪೂರ್ಣವಾಗಿ ಓದಿ ತಿಳಿಯಿರಿ.
ಈತ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದವ. ಹೆಸರು ಸೀತಾರಾಮ ಅಂತಾ. ಕಳೆದ ಮೂರ್ನಾಲ್ಕು ದಿನದಿಂದ ಈತ ಮೊದಲಿನ ಸೀತಾರಾಮನಾಗಿ ಉಳಿದಿಲ್ಲ. ಏನೇ ಮಾತಾಡಿದರೂ ಅರ್ಥ ಇಲ್ಲದಂತಾಗಿದೆ. ಯಾರೇ ಮಾತಾಡಿಸೋ ಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಕಾರಣವಾಗಿದ್ದು, ಹುಚ್ಚು ನಾಯಿ ಕಡಿತ..
ಹೌದು.. ಕೆಲವೇ ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸೀತಾರಾಮನಿಗೆ ಹುಚ್ಚು ನಾಯಿ ಬಂದು ಕಡಿದಿದೆ. ಕಡಿದ ತಕ್ಷಣವೇ ಆಸ್ಪತ್ರೆಗೆ ಹೋಗಿದ್ದರೇ ಸುಧಾರಣೆಯಾಗುತ್ತಿತ್ತೋ ಏನೋ. ಸೀತಾರಾಮ ಹುಚ್ಚು ನಾಯಿ ಕಡಿತವನ್ನ ನಿರ್ಲಕ್ಷ್ಯ ಮಾಡಿ, ಕೆಲಸದಲ್ಲಿ ಮುಳುಗಿದ್ದಾರೆ.
ಅಂದಿನ ನಾಯಿಯ ಕಡಿತದ ಪರಿಣಾಮ ಮೂರ್ನಾಲ್ಕು ದಿನಗಳಿಂದ ಹೆಚ್ಚಾಗಿದೆ. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಸೀತಾರಾಮನಿಗೆ ಚಿಕಿತ್ಸೆ ಕೊಡಿಸಲು ಹುಬ್ಬಳ್ಳಿಯ ಕಿಮ್ಸಗೆ ಕರೆತರಲಾಗಿದ್ದು, ಗುಣಮುಖರಾಗುತ್ತಾರಾ ಅಥವಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ.