ಹುಬ್ಬಳ್ಳಿಯ ನಡು ರಸ್ತೆಯಲ್ಲೇ ಗೂಳಿ ಕಾಳಗ- ಆತ ಬದುಕುಳಿದಿದ್ದೇ ಹೆಚ್ಚು: ಎಕ್ಸಕ್ಲೂಸಿವ್ ವೀಡಿಯೋ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಹೆಚ್ಚಾಗುತ್ತಿರುವ ಗೂಳಿಗಳ ಹಾವಳಿಯನ್ನ ತಡೆಗಟ್ಟಲು ಮಹಾನಗರ ಪಾಲಿಕೆಗೆ ಆಗದೇ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಅವೇ ಗೂಳಿಗಳು ದಾರಿ ಹೋಕರನ್ನ ಹೇಗೆ ತೊಂದರೆ ಕೊಟ್ಟು, ಪ್ರಾಣ ಹೋಗುವ ಸ್ಥಿತಿಗೆ ತಂದು ನಿಲ್ಲಿಸಿವೆ ಎಂಬುದನ್ನ ದೃಶ್ಯ ಸಮೇತ ನೋಡಿ..
https://www.youtube.com/watch?v=QQAFTciJLZA
ಇದು ಹುಬ್ಬಳ್ಳಿಯ ಶಹರ ಠಾಣೆಯ ಕೂಗಳತೆ ದೂರದಲ್ಲಿ ನಡೆದ ಘಟನೆ. ರಸ್ತೆಯಲ್ಲಿ ಹೋಗುತ್ತಿದ್ದ ನಾಮದೇವ ಎಂಬ ವ್ಯಕ್ತಿಗೆ ಗೂಳಿ ಹಾಯ್ದು ಗಾಯ ಮಾಡಿದೆ. ಯಾರೇ ಬಂದರೂ ಅದನ್ನ ತಡೆಯೋಕೆ ಆಗಿಯೇ ಇಲ್ಲ. ಕೆಲವು ನಿಮಿಷಗಳ ಹೋರಾಟದ ನಂತರ ಅಕ್ಕಪಕ್ಕದವರ ಸಹಾಯದಿಂದ ಅವರು ಜೀವ ಉಳಿಸಿಕೊಂಡಿದ್ದಾರೆ.
ಈ ದೃಶ್ಯವನ್ನಾದರೂ ನೋಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಕ್ರಮವನ್ನ ಜರುಗಿಸಬೇಕಿದೆ. ಇಲ್ಲದಿದ್ದರೇ ದಾರಿ ಮಧ್ಯದಲ್ಲೇ ಮನುಷ್ಯರ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ.