ಕಂಪನಿ ಆರಂಭಿಸಿದ್ದ ಗಣೇಶ ಬದ್ದಿ ಹುಬ್ಬಳ್ಳಿ ಮನೆಯಲ್ಲಿ ನೇಣಿಗೆ ಶರಣು

ಹುಬ್ಬಳ್ಳಿ: ತನ್ನದೇ ಜೀವನ ಈತರರಿಗೆ ಮಾದರಿಯಾಗುವಂತೆ ಬದುಕುತ್ತೇನೆ ಎಂದು ಹೇಳುತ್ತಿದ್ದ ಯುವಕನೇ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೇಹುಬ್ಬಳ್ಳಿಯಲ್ಲಿ ನಡೆದಿದ್ದು, ಮನೆಯವರೆಲ್ಲರೂ ದಿಗ್ಭ್ರಾಂತರಾಗಿ ಕಣ್ಣೀರು ಹಾಕುವಂತಾಗಿದೆ.
ಗಣೇಶ ಬದ್ದಿ ಎಂಬ ಯುವಕನೇ ಸಾವಿಗೀಡಾಗಿದ್ದು, ತನ್ನದೇ ಸ್ವಂತ ಕಂಪನಿಯನ್ನ ಹುಟ್ಟು ಹಾಕಿ ಹಲವು ವ್ಯವಹಾರಗಳನ್ನ ಮಾಡುವ ಕನಸು ಕಂಡು ಅದಕ್ಕಾಗಿ ಹಲವು ವ್ಯವಸ್ಥೆಯನ್ನ ಮಾಡಿಕೊಂಡಿದ್ದ. ನಿನ್ನೆ ಇಳಿಸಂಜೆ ಕೂಡಾ ಮನೆಯಲ್ಲಿ ಎಲ್ಲರೊಂದಿಗೂ ಹಸನ್ಮುಖಿಯಾಗಿ ಮಾತನಾಡುತ್ತ ಸಮಯ ಕಳೆದಿದ್ದಾನೆ.
ಬೆಳಗ್ಗೆ ಹತ್ತು ಗಂಟೆಯಾದರೂ ಏಳದೇ ರೂಮ್ ಮಲಗಿದ್ದಾನೆ ಎಬ್ಬಿಸಲು ಹೋದಾಗ, ಗಣೇಶ ನೇಣೀಗೆ ಶರಣಾಗಿರುವುದು ಗೊತ್ತಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಗಣೇಶನ ಮೃತ ದೇಹವನ್ನ ಕಿಮ್ಸಗೆ ರವಾನೆ ಮಾಡಿ, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಹಳೇಹುಬ್ಬಳ್ಳಿ ಠಾಣೆ ಪೊಲೀಸರು ನೇಣಿಗೆ ಶರಣಾಗಿರುವ ಗಣೇಶನ ಬಗ್ಗೆ ಮಾಹಿತಿಯನ್ನ ಪಡೆಯುತ್ತಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ವಿಚಾರವನ್ನ ಹೊರಗೆ ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ.