ಪಿಎಸೈಗಳ ಲವ್.. ಸೆಕ್ಸ್.. ದೋಖಾ… ರಾಧಾನಂದ ಪುರಾಣ..!
ಮೈಸೂರು: ನೀನ್ನ ಪ್ರೀತಿಸಿ ಮದುವೆಯಾಗುತ್ತೇನೆ ಎನ್ನುತ್ತಿದ್ದ ಪಿಎಸೈಯೋರ್ವ ನಂಬಿಸಿ, ಮಹಿಳಾ ಪಿಎಸೈಗೆ ದೋಖಾ ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.
ಮೈಸೂರಿನ ಎನ್. ಆರ್. ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ಆನಂದ ಎಂಬುವವರೇ, ಮೈಸೂರಿನ ವಿ ವಿ ಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ರಾಧಾ ಎಂಬುವವರಿಗೆ ಮೋಸ ಮಾಡಿದ್ದಾರೆಂದು ದೂರು ದಾಖಲಾಗಿದೆ.
ಇಬ್ಬರ ನಡುವೆ ಪ್ರೇಮಾಂಕುರವಾಗಿ ಓಡಾಡಿಕೊಂಡಿದ್ದರು. ಮದುವೆಯಾಗುವುದಾಗಿ ನಂಬಿಸಿದ್ದ ಆನಂದ್ ದೈಹಿಕ ಸಂಪರ್ಕ ಹೊಂದಿದ್ದರೆಂದು ಆರೋಪಿಸಿರುವ ಮಹಿಳಾ ಪಿಎಸ್ಐ, ಗರ್ಭವತಿಯಾಗಿದ್ದ ಪಿಎಸ್‌ಐ ರಾಧಾ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ.
ಪಿಎಸ್‌ಐ ಆನಂದ್ ಮತ್ತೊಂದು ಮದುವೆಯಾಗಿರುವ ಬಗ್ಗೆಯೂ ಆರೋಪಿಸಿರುವ ರಾಧಾ, ಬಲವಂತದ ಗರ್ಭಪಾತ ಮಾಡಿಸಿರುವ ಬಗ್ಗೆಯೂ ದೂರು ನೀಡಿದ್ದಾರೆ. ನನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪಿಎಸ್‌ಐ ಆನಂದ್ ಮೇಲೆ ಎಫ್‌ಐಆರ್ ದಾಖಲಾಗಿದೆ.