ಅಂಚಟಗೇರಿ ಬಳಿ ಅಂದರ್-ಬಾಹರ್: 5 ಬಂಧನ, ಮೂವರ ಪರಾರಿ- 3+2 ಆಟೋ ಬೈಕ್ ವಶ

ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿ ಗ್ರಾಮದ ಬಳಿಯ ಮೊರಾರ್ಜಿ ಶಾಲೆಯ ಹಿಂಭಾಗದಲ್ಲಿ ಜೂಜಾಟವಾಡುತ್ತಿದ್ದ ತಂಡದ ಮೇಲೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿ, ಐವರನ್ನ ಬಂಧಿಸಿದ್ದಾರೆ.
ಜೂಜಾಟದಲ್ಲಿ ಅಂದರ್-ಬಾಹರ್ ಆಡುತ್ತಿದ್ದ ಹಳೇಹುಬ್ಬಳ್ಳಿ ಮೇದಾರ ಓಣಿಯ ಮಾಬುಸಾಬ ಖಾಜಿ, ಅಬ್ಬಾಸಅಲಿ ಸೌದಾಗರ, ಈಶ್ವರನಗರದ ಅಬ್ದುಲ ಪಠಾಣ, ಕೃಷ್ಣಾಪುರ ಓಣಿಯ ಮಹ್ಮದಹುಸೇನ ನರಗುಂದ ಹಾಗೂ ದಿಡ್ಡಿ ಓಣಿಯ ಮಹ್ಮದಹನೀಫ ಬಮ್ಮಿಗಟ್ಟಿ ಎಂಬುವವರನ್ನ ಬಂಧನ ಮಾಡಲಾಗಿದ್ದು, ಮೂವರು ಒಂದು ಆಟೋ ಎರಡು ಬೈಕುಗಳಲ್ಲಿ ಪರಾರಿಯಾಗಿದ್ದಾರೆ.
ಬಂಧಿತರಿಂದ 4750 ರೂಪಾಯಿ ನಗದು, ಮೂರು ಬೈಕ್, ಎರಡು ಆಟೋರಿಕ್ಷಾಗಳು ಹಾಗೂ ಐದು ವಿವಿಧ ಕಂಪನಿಗಳ ಮೊಬೈಗಳನ್ನ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಬಗ್ಗೆ ಬಂಧಿತರಿಂದ ಮಾಹಿತಿಯನ್ನ ಪಡೆದಿದ್ದು, ಅವರನ್ನ ಪೊಲೀಸರು ಹುಡುಕುತ್ತಿದ್ದಾರೆ.
ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಎಎಸ್ಐ ಎಚ್.ಜೆ.ಜಾಧವ, ನಾರಾಯಣ ಐಹೊಳೆ ಸೇರಿದಂತೆ ಹಲವರು ದಾಳಿಯಲ್ಲಿ ಭಾಗವಹಿಸಿದ್ದರು.