‘ಗಬ್ಬಿ’ ಗೂಂಡಾಗಿರಿ: ಪೊಲೀಸರನ್ನೂ ಕ್ಯಾರೆ ಅನ್ನದ ರೌಡಿ ಷೀಟರ್
1 min readಹುಬ್ಬಳ್ಳಿ: ಎರಡು ಬೈಕುಗಳ ನಡುವೆ ನಡೆದ ಡಿಕ್ಕಿ ಸಮಯದಲ್ಲಿ ತನ್ನ ಹುಡುಗನೊಂದಿಗೆ ಮಾತಿಗಿಳಿದಿದ್ದ ಹಿರಿಯರಿಗೆ ಧಮಕಿ ಹಾಕಿ, ತನ್ನ ಗೂಂಡಾ ಪೃವತ್ತಿಯನ್ನ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರದಲ್ಲಿ ಪುಡಿ ರೌಡಿಗಳ ಹಾವಳಿ ವಿಪರಿತವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಕೂಡಾ ಅಮಾಯಕರ ಹಾಗೂ ಮುಗ್ದರ ಮೇಲೆ ಆವಾಜ್ ಹಾಕುತ್ತಾ ತಮ್ಮಷ್ಟಕ್ಕೆ ತಾವೇ ಡಾನ್ ಅನ್ನೋ ರೀತಿಯಲ್ಲಿ ಹವಾ ಮೆಂಟೇನ್ ಮಾಡುತ್ತಿದ್ದಾರೆ. ಆದ್ರೆ, ಇಷ್ಟು ದಿನಗಳ ಕಾಲ ಜನಸಾಮಾನ್ಯರ ಮೇಲೆ ತೋರುತ್ತಿದ್ದ ಇವರ ಪೌರುಷ ಇದೀಗ ಪೊಲೀಸರ ಮೇಲೆಯೂ ಕೂಡಾ ತೋರಿಸಲು ಶುರು ಮಾಡಿದ್ದಾರೆ.
ಹುಬ್ಬಳ್ಳಿಯ ಪೂನಾ ಬೆಂಗಳೂರು ರಸ್ತೆಯ ಬಳಿಯಲ್ಲಿ ಎರಡು ಯುವಕರ ದ್ವಿಚಕ್ರಗಳು ಪರಸ್ಪರ ಡಿಕ್ಕಿಯಾಗಿ ಸ್ವಲ್ಪ ಡ್ಯಾಮೇಜ್ ಆಗಿದ್ದವು. ಆಗ ಕೆಲವು ಜನ ಸೇರಿಕೊಂಡು ಇಲ್ಲ ತಪ್ಪು ಯಾರು ಮಾಡಿದ್ದಾರೆ. ಅವರ ಬಳಿಯಿಂದ ಡ್ಯಾಮೇಜ್ ವಾಹನವನ್ನು ರಿಪೇರಿ ಮಾಡಿ ಕೊಡುತ್ತೇವೆಂದು ಹೇಳಿ ಕಳುಹಿಸುವ ಹೊತ್ತಿನಲ್ಲೇ ಇನ್ನೊಬ್ಬನ ಯುವಕನ ಕಡೆಯ ಗುಂಪು ಅಲ್ಲಿ ಬಂದು ಬಿಡತ್ತೆ. ಆಗಲೇ, ಪುಡಿ ರೌಡಿಗಳು ರಸ್ತೆಯ ಮಧ್ಯೆಯೇ ಆವಾಜ್ ಹಾಕಲು ಪ್ರಾರಂಭ ಮಾಡ್ತಾರೆ.
ಈ ವಿಷಯ ಪೊಲೀಸ್ ಠಾಣೆಗೆ ತಲುಪಿದಾಗ ಸ್ಥಳಕ್ಕೆ ಇಬ್ಬರು ಪೋಲಿಸರು ಬರ್ತಾರೆ. ನಿಮ್ಮದು ಏನಪ್ಪಾ ಸಮಸ್ಯೆ ನೀವು ಟ್ರಾಫಿಕ್ ಪೊಲೀಸರು, ಇಲ್ಲೇನು ನಿಮ್ಮ ಕೆಲಸ ಮಾಡುತ್ತೀರಿ ಎಂದು ಪ್ರಶ್ನಿಸುವಂತಾಗಿದೆ.
ಈ ಭಾವಚಿತ್ರದಲ್ಲಿ ಹಳದಿ ಟೀ ಶರ್ಟ್ ಎಂಬಾತನ ಹೆಸರು ಗಬ್ಬಿ. ಹೀಗಾಗಿ ಇಂತಹ ದರ್ಪ. ಪೊಲೀಸರು ಗಬ್ಬಿಗೆ ಗುಬ್ಬಿ ತೋರಿಸಬೇಕಿದೆ.