ಬಸ್ ಚಲವ್ ಮಾಡ್ರೋ ಎಂದವನ ಕೈಯಲ್ಲಿತ್ತು ಚ…
ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ ಗಳು ಆರಂಭವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರಯಾಣಿಕನೋರ್ವ ಬಸ್ ಆರಂಭಿಸಿ ಎಂದು ಬಸಗಳತ್ತ ಚಪ್ಪಲಿ ಎಸೆದ ಘಟನೆ ನಡೆದಿದ್ದು, ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ.
ರವಿಕುಮಾರ ಎಂಬ ಕುಡುಕ ಮಹಾಶಯನೇ ಹಳೇ ಬಸ್ ನಿಲ್ದಾಣದಲ್ಲಿ ರಾದ್ಧಾಂತ ನಡೆಸಿದ್ದು, ಈತನಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೈಯಲ್ಲಿ ಚಪ್ಪಲಿ, ಬುಜಕ್ಕೊಂದು ಬ್ಯಾಗ್ ಹಾಕಿಕೊಂಡಿದ್ದ ಆಸಾಮಿ, ಯಾರೂ ಹೇಳಿದರೂ ಕೇಳದ ಸ್ಥಿತಿಯಲ್ಲಿದ್ದ.
ಹಿರಿಯ ಅಧಿಕಾರಿಗಳು ಹಳೇ ಬಸ್ ನಿಲ್ದಾಣಕ್ಕೆ ಬಂದು ಹೋದ ಕೆಲವೇ ನಿಮಿಷಗಳಲ್ಲಿ, ಪ್ರಯಾಣಿಕನ ಆಕ್ರೋಶ ಹೆಚ್ಚಾಗಿತ್ತು. ಕಳೆದ ಎರಡು ದಿನದಿಂದ ವಿಜಯಪುರಕ್ಕೆ ಹೋಗಲು ಆಗದೇ ಬಸ್ ನಿಲ್ದಾಣದಲ್ಲೇ ಮಲಗಿದ್ದ ರವಿಕುಮಾರ, ಬಸ್ ಆರಂಭದ ಮುನ್ನ ತನ್ನ ಸಿಟ್ಟನ್ನ ಹೊರ ಹಾಕಿದೆ.
ಕುಡುಕ ರವಿಕುಮಾರನಿಗೆ ಪೊಲೀಸರು ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿ, ಕಳಿಸಿದ್ದು. ತನ್ನೂರಿನತ್ತ ಪ್ರಯಾಣಿಕ ಪ್ರಯಾಣ ಬೆಳೆಸಿದ್ದಾನೆ.