ಶಿರಗುಪ್ಪಿ ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆ: ರಸ್ತೆ ಸಂಚಾರ ಬಂದ್
![](https://karnatakavoice.com/wp-content/uploads/2021/02/WhatsApp-Image-2020-12-14-at-2.36.50-PM-1024x509.jpeg)
ಹುಬ್ಬಳ್ಳಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ, ರೈತ ವಿರೋಧಿ ಸಂಬಂಧಿತ ಕಾನೂನುಗಳನ್ನು ಕೃಬಿಡಲು, ರೈತರ ಬೇಡಿಕೆಗಳನ್ನು ಮೋದಿ ಸರಕಾರ ಕೂಡಲೇ ಈಡೇರಿಸಲು ಆಗ್ರಹಿಸಿ ಇಂದು ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ-ಗದಗ ರಸ್ತೆಯ ಮಧ್ಯದಲ್ಲಿ ಬರುವ ಶಿರಗುಪ್ಪಿ ಗ್ರಾಮಸ್ಥರು, ಹೆದ್ದಾರಿಯನ್ನ ಬಂದ್ ಮಾಡಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ನೀತಿಯ ವಿರುದ್ಧ ಘೋಷಣೆ ಕೂಗಿದರು.
ಈ ಸಮಯದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ಅಮೃತ ಇಜಾರಿ, ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕೆ ಸಾಥ್ ನೀಡಲು ಮುಂದಾದ ಶಿರಗುಪ್ಪಿ ಗ್ರಾಮಸ್ಥರಿಗೆ ಧನ್ಯವಾದ ತಿಳಿಸುವ ಜೊತೆಗೆ, ಕೇಂದ್ರದ ಕೃಷಿ ನೀತಿಯು ರೈತರ ಜೀವನವನ್ನ ಹೇಗೆಲ್ಲ ನಾಶ ಮಾಡಲಿದೆ ಎಂಬುದನ್ನ ವಿವರಿಸಿದರು.
ಪ್ರತಿಭಟನೆಯಲ್ಲಿ ಶಿವಣ್ಣ ಹುಬ್ಬಳ್ಳಿ, ಅಮೃತ ಇಜಾರಿ, ಮಹೇಶ ಪತ್ತಾರ, ಗುರಣ್ಣ ದೇಸಾಯಿ, ಗುರನಗೌಡ ಬೆಳವಟಗಿ, ಶೇಖಣ್ಣ ನಾಯ್ಕರ, ಶಿದ್ದಪ್ಪ ಹಳ್ಳೂರು ಮತ್ತು ಶಿರಗುಪ್ಪಿ ರೈತರು ಭಾಗವಹಿಸಿದ್ದರು.