ಹೊಲಕ್ಕೆ ನುಗ್ಗಿದ ಬಸ್: ಕಿಡಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು..!
ಧಾರವಾಡ: ನವಲಗುಂದ ತಾಲೂಕಿನ ಹನಸಿ ಗ್ರಾಮದಿಂದ ಧಾರವಾಡದತ್ತ ಬರುತ್ತಿದ್ದ ವಾಯುವ್ಯ ರಸ್ತೆ ಸಾರಿಗೆ ಬಸ್ಸೊಂದು ನಿಯಂತ್ರಣ ತಪ್ಪಿ ಹೊಲದಲ್ಲಿ ಹೋದ ಘಟನೆಯೊಂದು ಶಿರಕೋಳ-ಮೊರಬ ರಸ್ತೆಯ ಮಧ್ಯ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಕಿಡಕಿಯಿಂದ ಜಿಗಿದು ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಘಟನೆ ನಡೆದಿದೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಧಾರವಾಡದಿಂದ ನವಲಗುಂದ ತಾಲೂಕಿನ ಹನಸಿ ಗ್ರಾಮಕ್ಕೆ ಹೋಗಿ ಮರಳಿ ಬರುತ್ತಿದ್ದ ಬಸ್ಸ ನಿಯಂತ್ರಣ ತಪ್ಪಿ, ಹೊಲದೊಳಗೆ ಹೋಗಿದ್ದೇ ತಡ ಕೆಲವರು ಕಿಡಕಿಯಿಂದ ಜಿಗಿದು ಹೊರಗಡೆ ಹೋಗಿದ್ದಾರೆ. ಆಗ ಕೆಲವರಿಗೆ ಗಾಯಗಳಾಗಿವೆ. ಓರ್ವ ವೃದ್ಧೆಗೆ ಕಾಲು ಮುರಿತವಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚಾಲಕ ಗಡ್ಡಿ ರಸ್ತೆಯಲ್ಲಿದ್ದ ತಗ್ಗನ್ನ ನೋಡದೇ ಬಸ್ ನ್ನ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಜಮೀನಿನಲ್ಲಿ ನುಗ್ಗಿದೆ. ನಿರ್ವಾಹಕ ಪುಂಡಲೀಕ ಸೇರಿದಂತೆ 25 ಪ್ರಯಾಣಿಕರು ಕೆಲಕಾಲ ಪ್ರಾಣ ಭಯದಿಂದ ಚೀರಾಟ ನಡೆಸಿದ್ದರು.
ನವಲಗುಂದ ಠಾಣೆ ಸಬ್ ಇನ್ಸಪೆಕ್ಟರ್ ಜಯಪಾಲ ಪಾಟೀಲ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಕಾನೂನು ಕ್ರಮವನ್ನ ಜರುಗಿಸಿದ್ದಾರೆ. ಈ ಘಟನೆಯಿಂದ ಶಿರಕೋಳ- ಮೊರಬ ರಸ್ತೆಯಲ್ಲಿ ಸಾರ್ವಜನಿಕರು ಹಿಂಡು ಹಿಂಡಾಗಿ ಸೇರಿದ್ದರು.