ನಾಗರಾಜ ಛಬ್ಬಿ ‘ಕೈ’ ಎಳೆದ ‘ಕಮಲ’ ಸಚಿವ: ಜೋಶಿಯವರೊಂದಿಗೆ ಮಾತಾಡಿದ್ದೇನು..

ಹುಬ್ಬಳ್ಳಿ: ನಗರದಲ್ಲಿನ ವಿಮಾನ ನಿಲ್ದಾಣದಲ್ಲಿಂದು ವಿಶೇಷವಾದ ಪ್ರಸಂಗವೊಂದು ನಡೆಯಿತು. ಕಾಂಗ್ರೆಸ್ ಪ್ರದೇಶ ರಾಜ್ಯಾಧ್ಯಕ್ಷರ ಆಗಮನಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್ ಮಾಜಿ ವಿಧಾಣಪರಿಷತ್ ಸದಸ್ಯರು ಸೇರಿದಂತೆ ಹಲವರು ಕಾಯುತ್ತಿದ್ದಾಗಲೇ, ವಿಚಿತ್ರ ಘಟನೆಯೊಂದು ನಡೆದಿದೆ.
ಯಲ್ಲಾಪುರದ ಶಾಸಕರು ಆಗಿರುವ ಹಾಲಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಬಂದು ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡುತ್ತ ನಿಂತಾಗ, ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಬಂದು ಎಲ್ಲರ ಕುಶಲೋಪರಿ ವಿಚಾರಿಸಿ ಮುನ್ನಡೆದರು. ಆದರೆ..
ಹೆಬ್ಬಾರ ಕಾಂಗ್ರೆಸ್ ಗುಂಪನ್ನ ಬಿಟ್ಟು ಮುಂದೆ ಬಂದು ಮಾಜಿ ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿಯವರನ್ನ ಕರೆದುಕೊಂಡು ಮುಂದೆ ಬಂದರು. ಅಷ್ಟೇ ಅಲ್ಲ, ಜೋಶಿಯವರನ್ನ ಕರೆದು ನಿಲ್ಲಿಸಿದರು.
ಅಷ್ಟರಲ್ಲೇ ಪ್ರಲ್ಹಾದ ಜೋಶಿಯವರ ಜೊತೆ ಮಾತಾಡುತ್ತಲೇ ನಾಗರಾಜ ಛಬ್ಬಿಯವರ ಬೆನ್ನು ತಟ್ಟುತ್ತಿದ್ದರು. ಇದಕ್ಕೆ ಹಲವು ರೀತಿಯ ವ್ಯಾಖ್ಯಾನಗಳು ಆರಂಭಗೊಳ್ಳುವಂತೆ ಕಾಂಗ್ರೆಸ್ ವಲಯದಲ್ಲಿ ಮಾತುಗಳು ಆರಂಭವಾಗುವಂತಹ ಘಟನೆಯಿದು.