“420” ಸಮೇತ 20ಲಕ್ಷದ ನಗ-ನಗದು ವಶ: ವಿದ್ಯಾನಗರ ಠಾಣೆ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ: ಗ್ರಾಹಕರಿಗೆ ಹೊಸದಾಗಿ ಬಂಗಾರ ಮಾಡಿಕೊಡುತ್ತೇನೆ. ಹಾಲ್ ಮಾರ್ಕ್ ಚಿನ್ನ ಕೊಡುತ್ತೇನೆಂದು ವಂಚನೆ ಮಾಡುತ್ತಿದ್ದ ‘420’ ಯನ್ನ ಬಂಧನ ಮಾಡುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಉಣಕಲ್ ಸಂತೆಬೈಲಿನಲ್ಲಿ ಗಾಯತ್ರಿ ಜ್ಯುವೇಲರ್ಸ್ ವ್ಯವಹಾರ ಮಾಡಿಕೊಂಡಿದ್ದ ಸುನೀಲ ಮೋಹನ ಪತ್ತಾರ ಎಂಬಾತನೇ ಬಂಧಿತನಾಗಿದ್ದು, ಇತ್ತೀಚೆಗೆ ಈತ ಚೇತನಾ ಕಾಲೇಜ್ ಹಿಂಭಾಗದ ಅಕ್ಷಯ ಕಾಲನಿಯಲ್ಲಿ ವಾಸವಾಗಿದ್ದ.
ಸಾರ್ವಜನಿಕರಿಂದ ಚೀಟಿ ಮೂಲಕವೂ ಹಣ ಪಡೆದಿದ್ದ. ಈತನ ವಂಚನೆ ಬಗ್ಗೆ ದೂರು ಪಡೆದು ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿರುವ ಪೊಲೀಸರು, ಆರೋಪಿಯಿಂದ 330 ಗ್ರಾಂ ಚಿನ್ನ ಹಾಗೂ ಐದು ಲಕ್ಷ ಹನ್ನೊಂದು ಸಾವಿರ ರೂಪಾಯಿಯನ್ನ ವಶಕ್ಕೆ ಪಡೆಯಲಾಗಿದೆ.
ವಿದ್ಯಾನಗರ ಠಾಣೆ ಇನ್ಸಪೆಕ್ಟರ್ ಆನಂದ ಒನಕುದ್ರೆ ನೇತೃತ್ವದಲ್ಲಿ ಪಿಎಸ್ಐ ಶಿವಾನಂದ ಬನ್ನಿಕೊಪ್ಪ, ಎಎಸ್ಐ ಬಸವರಾಜ ಕೊಟಬಾಗಿ ಸಿಬ್ಬಂದಿಗಳಾದ ಬಸವರಾಜ ಕಿತ್ತೂರ, ಬಿ.ವಿ.ಚಿಕ್ಕಬಾಸೂರ, ಯಲ್ಲಪ್ಪ ಶೇಂಡ್ಗೆ, ಎಂ.ಎನ್.ಗುರಮ್ಮನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.